ಪುತ್ತೂರು:ಜಿಲ್ಲೆಯಾದ್ಯಂತ 12 ಶಾಖೆಗಳನ್ನು ಹೊಂದಿರುವ ಡಾ .ಕಿರಣ್ ಕುಮಾರ್ ಗಾನಸಿರಿ ಸಾರಥ್ಯದ ಸುಪ್ರಸಿದ್ಧ ಸಂಗೀತ ಸಂಸ್ಥೆ ಗಾನಸಿರಿ ಕಲಾ ಕೇಂದ್ರದ ಕುಟ್ರುಪಾಡಿ ಶಾಖೆಯ ವಾರ್ಷಿಕ ಹಬ್ಬ ಗಾನಸಿರಿ ಸ್ವರಲಹರಿ 2025 ಕಡಬದ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಗಾನಸಿರಿ ಕುಟ್ರುಪಾಡಿ ಶಾಖೆಯ ವಿದ್ಯಾರ್ಥಿಗಳಲ್ಲದೆ, ಗಾನಸಿರಿ ತರಗತಿಗಳು ನಡೆಯುತ್ತಿರುವ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಿಂದ ಆಯ್ದ ಒಟ್ಟು 42 ವಿದ್ಯಾರ್ಥಿಗಳು ಈ ಟಿವಿ ರಿಯಾಲಿಟಿ ಶೋ ಮಾದರಿಯ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಹಿಮ್ಮೇಳದಲ್ಲಿ ಡಾ. ದಿನೇಶ್ ರಾವ್ ಸುಳ್ಯ, ಸುಹಾಸ್ ಹೆಬ್ಬಾರ್ ಮಣಿಯ ಮತ್ತು ಸುದರ್ಶನ್ ಆಚಾರ್ಯ ಸಹಕರಿಸಿದರು.