ಪುತ್ತೂರು: ಅಲ್ಟ್ರಾಟೆಕ್ ರೆಡಿ ಮಿಕ್ಸ್ ಕಾಂಕ್ರೀಟ್ ಪ್ಲಾಂಟ್ (ಆರ್‌ಎಂಸಿ) ಇದೀಗ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ದಾಸಕೋಡಿಯಲ್ಲಿ ಶುಭಾರಂಭಗೊಂಡಿದೆ. ಸಚಿನ್ ವೆಂಚರ್ಸ್ ಸಂಸ್ಥೆಯ ಮುಖ್ಯಸ್ಥ ಸಚಿನ್ ನಾಯಕ್ ಎಸ್ ಅವರ ಮಾಲಿಕತ್ವದಲ್ಲಿ ಈ ಪ್ಲಾಂಟ್ ಆರಂಭಗೊಂಡಿದೆ. ಪುತ್ತೂರು, ಸುಳ್ಯ, ಕೊಡಗು ಭಾಗಕ್ಕೆ ರೆಡಿ ಮಿಕ್ಸ್ ಕಾಂಕ್ರೀಟ್ ಸುಲಭದಲ್ಲಿ ಸಿಗಲಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಆರ್‌ಎಸ್‌ಎಸ್ ಹಿರಿಯ ಮುಖಂಡ ಡಾ. ಪ್ರಭಾಕರ್ ಭಟ್ ಕಲ್ಲಡ್ಕ, ದೀಪ ಬೆಳಗಿಸುವುದರ ಮೂಲಕ ಘಟಕವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ರೆಡಿ ಮಿಕ್ಸ್ ಕಾಂಕ್ರೀಟ್ ತಯಾರು ಘಟಕ ಆಧುನಿಕ ತಾಂತ್ರೀಕರಣದಿಂದ ಕೂಡಿದ್ದು, ಎಲ್ಲವೂ ಕಂಪ್ಯೂಟರೀಕರಣವಾಗಿದೆ. ಹೀಗಾಗಿ ಇದರಲ್ಲಿ ಯಾವುದೇ ಮೋಸ, ವಂಚನೆಯಾಗಲು ಸಾಧ್ಯವಿಲ್ಲ. ಇಂತಹ ವ್ಯವಸ್ಥೆ ಇಂದಿನ ಕಾಲಕ್ಕೆ ಅನಿವಾರ್ಯವಾಗಿದೆ ಎಂದರು.
ಬಹುಶಃ ಸುಳ್ಯ, ಪುತ್ತೂರು, ಕೊಡಗು ಭಾಗಗಳಿಗೆ ಕಾಂಕ್ರೀಟ್ ಮಿಕ್ಸ್ ಮಾಡಿ ಕೊಡುವಂತಹ ಏಕೈಕ ಘಟಕ ಇದಾಗಿದೆ ಎಂದ ಪ್ರಭಾಕರ್ ಭಟ್, ಈ ಘಟಕವನ್ನು ಪ್ರಾರಂಭಿಸಿದ ಸಚಿನ್ ಮತ್ತು ಇವರ ತಂದೆ ಮಂಜುನಾಥ್ ನಾಯಕ್ ಎಸ್ ಅವರಿಗೆ ಶುಭಹಾರೈಸಿ, ಕರ್ನಾಟಕದ ಕೇಶವ ಹೆಗಡೆ ಅವರು ಅಲ್ಟ್ರಾಟೆಕ್‌ನ ಆರ್‌ಎಂಸಿ ವಿಭಾಗದ ನ್ಯಾಷನಲ್ ಹೆಡ್ ಆಗಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ ಎಂದರು.
ಆರ್‌ಎಂಸಿ ನ್ಯಾಷನಲ್ ಹೆಡ್ ಕೇಶವ ಹೆಗಡೆ ಮಾತನಾಡಿ, ಅಲ್ಟ್ರಾಟೆಕ್ ಕಂಪನಿಯು ಈ ಭಾಗಗಳಿಗೆ ಉತ್ತಮ ಕಾಂಕ್ರೀಟ್ ಒದಗಿಸಲಿದೆ ಎಂದರು. ಅಲ್ಲದೆ, ಈ ಕಂಪನಿಯೊಂದಿಗೆ ಪಾರ್ಟ್ನರ್‌ಶಿಪ್ ಮಾಡಿಕೊಂಡಿರುವ ಸಚಿನ್ ಅವರಿಗೆ ಅಭಿನಂದಿಸಿ ಶುಭಹಾರೈಸಿದರು.
ಕಾರ್ಯಕ್ರಮವನ್ನು ಲಕ್ಷ್ಮೀಕಾಂತ್ ಎಸ್ ನಿರೂಪಿಸಿ ವಂದಿಸಿದರು. ಸಚಿನ್ ಪತ್ನಿ ಶ್ರದ್ಧಾ ನಾಯಕ್ ಪ್ರಾರ್ಥನೆ ಗೀತೆ ಹಾಡಿದರು. ಈ ವೇಳೆ ಆರ್.ಎಂ.ಸಿ.ಯ ದಕ್ಷಿಣ ಭಾರತದ ಸೇವಾ ಮುಖ್ಯಸ್ಥ ರೇವಣ್ಣ ಸಿದ್ದಪ್ಪ, ಕವಿತಾ ರಾಜ್ ಇನ್ಫ್ರಾಟೆಕ್ ಪ್ರೈ.ಲಿ.ನ ರಾಜೇಶ್ ಕನ್ನೂರು, ಸಚಿನ್ ಅವರ ತಂದೆಯೂ ಆಗಿರುವ ಸಚಿನ್ ಟ್ರೇಡಿಂಗ್ ಮುಖ್ಯಸ್ಥ ಮಂಜುನಾಥ್ ನಾಯಕ್ ಎಸ್, ವರದರಾಜ್ ನಾಯಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.