ಕುಂಜೂರುಪಂಜ ಇರುವೆರ್ ಉಳ್ಳಾಕುಲು ದೈವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ- ಶ್ರೀದುರ್ಗಾ ಭಜನಾ ಮಂದಿರದ ವಾರ್ಷಿಕೋತ್ಸವಕ್ಕೆ ಹೊರಕಾಣಿಕೆ

0

ಪುತ್ತೂರು: ಆರ್ಯಾಪು ಗ್ರಾಮದ ಕುಂಜೂರುಪಂಜ ಶ್ರೀ ದುರ್ಗಾ ಭಜನಾ ಮಂದಿರದ ಆವರಣದಲ್ಲಿ 3 ದಿನಗಳ ಕಾಲ ಸಂಭ್ರಮಿಸಲಿರುವ ಭಜನಾ ಮಂದಿರದ 22ನೇ ವಾರ್ಷಿಕೋತ್ಸವ, ನೂತನವಾಗಿ ನಿರ್ಮಾಣಗೊಂಡ ಗ್ರಾಮ ದೈವ ಇರುವೆರ್ ಉಳ್ಳಾಕುಲು ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ದೈವಗಳ ನೇಮೋತ್ಸವಗಳಿಗೆ ಫೆ.9ರಂದು ಚಾಲನೆ ದೊರೆತಿದ್ದು ಬೆಳಿಗ್ಗೆ ಭಕ್ತಾದಿಗಳಿಂದ ಅದ್ದೂರಿಯ ಹಸಿರು ಹೊರಕಾಣಿಕೆ ಮೆರವಣಿಗೆ ನಡೆಯಿತು.


ಗ್ರಾಮದ ವಿವಿಧ ಭಾಗಗಳಾದ ಶ್ರೀರಾಮ ಭಜನಾ ಮಂದಿರ ಬಂಗಾರಡ್ಕ, ಶ್ರೀ ಮಹಾಲಕ್ಷ್ಮೀ ಭಜನಾ ಮಂದಿರ ದೊಡ್ಡಡ್ಕ, ಶ್ರೀಜಠಾಧಾರಿ ಭಜನಾ ಮಂದಿರ ಅಜ್ಜಿಕಲ್ಲು, ಶ್ರೀದುರ್ಗಾಪರಮೇಶ್ವರಿ ಭಜನಾ ಮಂದಿರ ಕುಂಜೂರು, ಮಹಾಮ್ಮಾಯಿ ಸೇವಾ ಸಮಿತಿ ವಳತ್ತಡ್ಕ ಹಾಗೂ ಶ್ರೀ ಆಂಜನೇಯ ಭಜನಾ ಮಂದಿರ ಬೊಳ್ಳಾಣದಲ್ಲಿ ಸಂಗ್ರಹಗೊಂಡ ಹಸಿರು ಹೊರೆಕಾಣಿಕೆಯು ದೇವಸ್ಯದಲ್ಲಿ ಜಮಾವಣೆಗೊಂಡು ಅಲ್ಲಿಂದ ಮೆರವಣಿಗೆಯ ಮೂಲಕ ಭಜನಾ ಮಂದಿರಕ್ಕೆ ಆಗಮಿಸಿತು. ಹೊರೆಕಾಣಿಕೆ ಮೆರವಣಿಗೆಗೆ ಆರ್ಯಾಪು ಗ್ರಾ.ಪಂ ಸದಸ್ಯ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ ಹಾಗೂ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಬಲ ರೈ ವಳತ್ತಡ್ಕ ಚಾಲನೆ ನೀಡಿದರು.

ಮಕ್ಕಳ ಕುಣಿತ ಭಜನೆ, ಹೊರೆಕಾಣಿಕೆ ತುಂಬದ ವಾಹಗಳೊಂದಿಗೆ ಹೊರೆಕಾಣಿಕೆ ಮೆರವಣಿಗೆಯು ಭಜನಾ ಮಂದಿರಕ್ಕೆ ಸಾಗಿಬಂದಿದೆ. ಶ್ರೀ ದುರ್ಗಾ ಸೇವಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಗೌಡ ಗೆಣಸಿನಕುಮೇರು, ಶ್ರೀದುರ್ಗಾ ಸೇವಾ ಸಮಿತಿ ಕಾರ್ಯದರ್ಶಿ ಜಗದೀಶ್ ಪೂಜಾರಿ ವಳತ್ತಡ್ಕ, ಕೋಶಾಧಿಕಾರಿ ನವೀನ್ ಕುಮಾರ್ ಜಿ.ಟಿ., ಇರುವೆರ್ ಉಳ್ಳಾಕುಲು ದೈವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ರವೀಂದ್ರನಾಥ ಕಲ್ಲೂರಾಯ, ಕಾರ್ಯದರ್ಶಿ ಗಂಗಾಧರ ರೈ ಕಲ್ಕೋಟೆ, ಕೋಶಾಧಿಕಾರಿ ಜಿ.ಟಿ. ನಾರಾಯಣ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಲ್ಕೋಟೆ ಕಿಟ್ಟಣ್ಣ ರೈ, ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ ನಾಯ್ಕ ಜಂಗಮುಗೇರು, ಕಾರ್ಯದರ್ಶಿಗಳಾದ ಸುರೇಶ್ ನಾಯ್ಕ ದೇವಸ್ಯ, ಜಯಂತ್ ಕುಂಜೂರುಪಂಜ, ಕೋಶಾಧಿಕಾರಿ ರಮಾನಾಥ ಶೆಟ್ಟಿ ಮೇಗಿನಪಂಜ, ಉಪಾಧ್ಯಕ್ಷರಾದ ಬಾಲಕೃಷ್ಣ ಪೂಜಾರಿ ಮೇಗಿನಪಂಜ, ಉಮಾವತಿ ರೈ ಗೆಣಸಿನಕುಮೇರು, ನಾರಾಯಣ ರೈ ಗೆಣಸಿನಕುಮೇರು, ವೆಂಕಟ್ರಮಣ ಕಲ್ಲೂರಾಯ, ಜತೆ ಕಾರ್ಯದರ್ಶಿ ಅಭಿಲಾಶ್ ರೈ ಬಂಗಾರಡ್ಕ, ವಿವಿಧ ಉಪ ಸಮಿತಿಗಳ ಸಂಚಾಲಕರು, ಸದಸ್ಯರು ಸೇರಿದಂತೆ ನೂರಾರು ಮಂದಿ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಶೃಂಗಾರಗೊಂಡ ಕುಂಜೂರುಪಂಜ:
ಪುತ್ತೂರು-ಬೆಳಿಯೂರುಕಟ್ಟೆ-ಪುಣಚ ರಸ್ತೆಯ ಕುಂಜೂರುಪಂಜ ಶ್ರೀದುರ್ಗ ಭಜನಾ ಮಂದಿರದ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮಗಳಿಗೆ ದೇವಸ್ಯದಿಂದ ಪಿಲಿಗುಂಡ ತನಕ ರಸ್ತೆಯಲ್ಲಿ ಅಲ್ಲಿಲ್ಲಿ ಆಕರ್ಷಕ ಭಕ್ತಾದಿಗಳನ್ನು ಸ್ವಾಗತಿಸುವ ಧ್ವಾರಗಳು, ಬ್ಯಾನರ್, ಬಂಟಿಂಗ್ಸ್‌ಗಳು ರಾರಾಜಿಸುತ್ತಿದೆ. ಆಕರ್ಷಕ ವಿದ್ಯುತ್ ದೀಪಗಳಿಂದ ಶೃಂಗಾರಗೊಂಡಿರುವ ಕುಂಜೂರುಪಂಜವು ಭಕ್ತರನ್ನು ಕೈಬೀಸಿ ಕರೆಯುತ್ತಿದೆ.
ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ವೇ.ಮೂ ಉದಯನಾರಾಯಣ ಕಲ್ಲೂರಾಯರವರ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಂಜೆ ತಂತ್ರಿಗಳ ಆಗಮನದ ಬಳಿಕ ಆಚಾರ್ಯವರಣ, ಸ್ಥಳಶುದ್ಧಿ, ದೇವತಾ ಪ್ರಾರ್ಥನೆ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ಪೂಜಾ ಬಲಿ, ನೂತನ ವಿಂಬ ಜಲಾಧಿವಾಸ, ಪ್ರಾಕಾರ ಬಲಿ, ಸುದರ್ಶನ ಹೋಮ, ಬಾಧಾ ಉಚ್ಚಾಟನೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.


ಫೆ.10ರಂದು ಮುಂಜಾನೆ ಶ್ರೀದುರ್ಗಾ ಭಜನಾ ಮಂದಿರದ 22ನೇ ವಾರ್ಷಿಕೋತ್ಸವದ ಅಂಗವಾಗಿ ಅರ್ಧ ಏಕಾಹ ಭಜನೆ ಪ್ರಾರಂಭಗೊಳ್ಳಲಿದೆ. ನಂತರ 12ಕಾಯಿ ಮಹಾಗಣಪತಿಹೋಮ, ಬ್ರಹ್ಮಕಲಶಪೂಜೆ, ಇರುವೆರ್ ಉಳ್ಳಾಕುಲು ಬಿಂಬ ಪ್ರತಿಷ್ಠಾ ಕಲಶಾಭಿಷೇಕ, ತಂಬಿಲ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಭಜನಾ ವಾರ್ಷಿಕೋತ್ಸವದಲ್ಲಿ ಶ್ರೀಕೃಷ್ಣ ಭಜನಾ ಮಂಡಳಿ ಗುಮ್ಮಟೆಗದ್ದೆ, ಶ್ರೀರಾಮ ಭಜನಾ ಮಂಳಿ ಬೆಳಿಯೂರುಕಟ್ಟೆ, ಶ್ರೀಮಹಿಷಮರ್ದಿನಿ ಭಜನಾ ಮಂಡಳಿ ಆಜೇರು, ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ದೊಡ್ಡಡ್ಕ, ಶ್ರೀರಾಮ ಭಜನಾ ಮಂಡಳಿ ಬಂಗಾರಡ್ಕ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರು, ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಮೊಟ್ಟೆತ್ತಡ್ಕ, ಶ್ರೀಭಟ್ಟಿ ವಿನಾಯಕ ಭಜನಾ ಮಂಡಳಿ ಬಲ್ನಾಡು, ಶ್ರೀಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿ ಕುಮಾರಮಂಗಳ, ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಬೆಟ್ಟಂಪಾಡಿ, ವೈದೇಹಿ-ವೈಷ್ಣವೀ ಭಜನಾ ಮಂಡಳಿ ಬೊಳುವಾರು, ಶ್ರೀಅಯ್ಯಪ್ಪ ಭಜನಾ ಮಂಡಳಿ ರೆಂಜ ಹಾಗೂ ಶ್ರೀ ಆಂಜನೇಯ ಭಜನಾ ಮಂಡಳಿ ಬೊಳ್ಳಾಣ ಅರ್ಧ ಏಕಾಹ ಭಜನೆಯಲ್ಲಿ ಸಹಕರಿಸಲಿದ್ದಾರೆ.


ಸಂಜೆ ಅರ್ಧಏಕಾಹ ಭಜನೆಯ ಮಂಗಳೋತ್ಸವ, ಮಂಗಳಾರತಿ ನಡೆಯಲಿದೆ. ನಂತರ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಿಟ್ಟಣ್ಣ ರೈ ಕಲ್ಕೋಟೆ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ, ಬೆಂಗಳೂರಿನ ಉದ್ಯಮಿ ಸತೀಶ್ ರೈ ಮಿಶನ್‌ಮೂಲೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಶಿಧರ್ ಎಂ. ಅತಿಥಿಗಳಾಗಿ ಆಗಮಿಸಲಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕ ಡಾ.ರವೀಶ್ ಪಡುಮಲೆ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರವೀಂದ್ರನಾಥ ಕಲ್ಲೂರಾಯ, ಶ್ರೀದುರ್ಗಾ ಸೇವಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಗೌಡ ಗೆಣಸಿನಕುಮೇರು ಉಪಸ್ಥಿತರಿರಲಿದ್ದಾರೆ.


ಫೆ.11ರಂದು ಇರುವೆರ್ ಉಳ್ಳಾಕುಲು ದೈವಗಳ ನೇಮೋತ್ಸವ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆಯೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ ಎಂದು ಶ್ರೀದುರ್ಗಾ ಸೇವಾ ಸಮಿತಿ, ಇರುವೆರ್ ಉಳ್ಳಾಕುಲು ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here