ವಿಟ್ಲ: ಪುಟಾಣಿ ಪ್ರತಿಭೆ ಅದಿತಿ ಪ್ರಶಾಂತ್ ಪ್ಯಾಷನ್ ಶೋ ಸ್ಪರ್ಧೆಯಲ್ಲಿ ಮಾರ್ಜಲ ನಡಿಗೆಯ ಮೂಲಕ ಗೆಲ್ಲರ ಗಮನ ಸೆಳೆದು ಗೆಲುವಿನ ಪಟ್ಟ ತನ್ನದಾಗಿಸಿಕೊಂಡಿದ್ದಾರೆ. ಕಲಾ ನವೀನ್ ಫಿಲಂ ಅಕಾಡೆಮಿ ಬೆಂಗಳೂರು ಇವರ ನೇತೃತ್ವದಲ್ಲಿ ನಡೆದ ಗ್ರಾಂಡ್ ಸೌತ್ ಇಂಡಿಯಾ 2024-25ರಲ್ಲಿ ಗೆಲುವಿನ ಪಟ್ಟವನ್ನು ಅದಿತಿ ಮುಡಿಗೇರಿದೆ.
ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಅದಿತಿ ಪಲ್ಲವಿ ಪ್ರಶಾಂತ್ ನಾಯ್ಕ್ ದಂಪತಿಗಳ ಪುತ್ರಿ. 5ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಈಕೆ ತನ್ನ ಓದುವಿನ ಜೊತೆಗೆ ಡ್ಯಾನ್ಸ್, ಯಕ್ಷಗಾನ, ಭರತನಾಟ್ಯ ತರಬೇತಿ ಪಡೆಯುತ್ತಿದ್ದು, ಹಲವಾರು ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ದಾರೆ. 5ವರ್ಷದ ಎಳೆವೆಯಲ್ಲಿರುವಾಗ ಕಲರ್ಸ್ ಕನ್ನಡ ಚಾನಲ್‌ನ ರಾಧಾರಮಣ, ಶಾಂತಂ ಪಾಪಂ ಸೇರಿ ಅನೇಕ ಸೀರಿಯಲ್‌ನಲ್ಲಿ ನಟಿಸಿದ್ದಾರೆ. ನೃತ್ಯ ಕ್ಷೇತ್ರದಲ್ಲೂ ತನ್ನದೆ ಆದ ಚಾಪನ್ನ ಮೂಡಿರುವ ಈ ಬಾಲ ಪ್ರತಿಭೆಗೆ ಹಲವು ಪ್ರಶಸ್ತಿಗಳ ಜೊತೆಗೆ ರಾಜ್ಯೋತ್ಸವದ ಪ್ರಶಸ್ತಿಯೂ ಸಿಕ್ಕಿದೆ.