ಬಜತ್ತೂರು: ಅಲ್ಯೂಮಿನಿಯಂ ದೋಟಿಗೆ ವಿದ್ಯುತ್ ಸ್ಪರ್ಶ- ಕಾರ್ಮಿಕ ವೀರಭದ್ರ ಮೃತ್ಯು

0

ಉಪ್ಪಿನಂಗಡಿ : ತೋಟದಲ್ಲಿ ದೋಟಿ ಬಳಸಿ ಸೀಯಾಳ ಕೀಳುತ್ತಿರುವಾಗ ಅಲ್ಯೂಮೀನಿಯಂ ದೋಟಿಗೆ ವಿದ್ಯುತ್ ತಂತಿ ಸ್ಪರ್ಶಗೊಂಡು ತೋಟದ ಕಾರ್ಮಿಕ ದಾವಣಗೆರೆ ಮೂಲದ ವೀರಭದ್ರ (29 ವ.) ಎಂಬವರು ಸಾವನ್ನಪ್ಪಿದ ಘಟನೆ ಬುಧವಾರದಂದು ಬಜತ್ತೂರು ಗ್ರಾಮದ ಕುವೆಚ್ಚಾರ್ ಎಂಬಲ್ಲಿ ನಡೆದಿದೆ.


ಕುವೆಚ್ಚಾರ್ ತೋಟದಲ್ಲಿ ಕರ್ತವ್ಯ ನಿರ್ವಸುತ್ತಿದ್ದ ವೇಳೆ ಕಾಡಿದ ಹೊಟ್ಟೆ ನೋವು ನಿವಾರಣೆಗೆಂದು ತೋಟದಲ್ಲಿದ್ದ ತೆಂಗಿನ ಮರದಿಂದ ಸೀಯಾಳವೊಂದನ್ನು ಕೀಳಲೆಂದು ದೋಟಿ ಬಳಸಲು ಮುಂದಾದಾಗ ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ದೋಟಿಗೆ ಸ್ಪರ್ಶವಾಗಿ ವೀರಭದ್ರ ವಿದ್ಯುತ್ ಆಘಾತಕ್ಕೊಳಗಾದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ, ಅಲ್ಲಿ ಅವರು ಮೃತಪಟ್ಟರೆಂದು ತಿಳಿದುಬಂದಿದೆ.


ಮೃತ ವೀರಭದ್ರ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಪಲ್ಲಾಗಟ್ಟೆ ಮನೆ ನಿವಾಸಿ ಗುತ್ಯಪ್ಪ ಎಂಬವರ ಮಗನಾಗಿದ್ದು, ತೋಟದ ಕಾರ್ಮಿಕನಾಗಿ ಕುವೆಚ್ಚಾರ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗುತ್ಯಪ್ಪರವರು ನೀಡಿದ ದೂರಿನ ಅನುಸಾರ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.

LEAVE A REPLY

Please enter your comment!
Please enter your name here