ಪುತ್ತೂರು: ಪೆರುವಾಜೆ ಗ್ರಾಮದ ಮುಕ್ಕೂರು ಹಿರಿಯ ಪ್ರಾಥಮಿಕ ಶಾಲೆಗೆ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್‌ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಯೋಜನೆಯಲ್ಲಿ 2 ಕಂಪ್ಯೂಟರ್‌ಗಳನ್ನು ಬ್ಯಾಂಕ್‌ನ ಧಾರವಾಡ ಪ್ರಧಾನ ಕಚೇರಿಯ ಸೀನಿಯರ್ ಮ್ಯಾನೇಜರ್ ನವೀನ್ ರೆಡ್ಡಿ ಶಾಲೆಗೆ ಕೊಡುಗೆಯಾಗಿ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ಜಯಂತ್ ಕುಂಡಡ್ಕ, ಹೊನ್ನಪ್ಪಗೌಡ ಚಾಮುಂಡಿಮೂಲೆ, ಪ್ರಸಾದ್ ಕುಂಡಡ್ಕ, ಕಿರಣ್ ಚಾಮುಂಡಿಮೂಲೆ ಮತ್ತು ಶಾಲಾ ಮುಖ್ಯಗುರು, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕ ವೃಂದ ಉಪಸ್ಥಿತರಿದ್ದರು.