ಬಡಗನ್ನೂರು: ಆದಿದೈವ ಧೂಮಾವತಿ, ಸಾಯನ ಬೈದ್ಯರ ಗುರುಪೀಠ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ನಂದನಬಿತ್ತ್‌ಲ್ ಶ್ರೀ ಕ್ಷೇತ್ರ ಗೆಜ್ಜೆಗಿರಿ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ಮಾ.4 ರಂದು ಬೆಳಗ್ಗೆ 6 ರಿಂದ ಗಣಪತಿ ಹೋಮ, ಗುರುಪೂಜೆ, ಮೂಲಸ್ಥಾನ ಗರಡಿ, ಬೆಮ್ಮೆರೆ ಗುಂಡ, ಸತ್ಯಧರ್ಮ ಚಾವಡಿಯಲ್ಲಿ ನವಕ ಪ್ರಧಾನ ಹೋಮ, ನವಕ ಕಲಶಾಭಿಷೇಕ, ಅಲಂಕಾರ ಪೂಜೆ, ಗರಡಿಯಲ್ಲಿ ಮಹಾಪೂಜೆ, ಮಧ್ಯಾಹ್ನ ಗಂ 12.30 ಕ್ಕೆ ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಗೌರವಾಧ್ಯಕ್ಷ ಪೀತಾಂಬರ ಹೇರಾಜೆ ,ಜಯಂತ ನಡುಬೈಲು, ಮೊಕ್ತೇಸರ ಶ್ರೀಧರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ ಕೆ.ಬಿ. ಉಪಾಧ್ಯಕ್ಷರಾದ ಉಲ್ಲಾಸ್ ಕೋಟ್ಯಾನ್, ದೀಪಕ್ ಕೋಟ್ಯಾನ್ ಗುರುಪುರ, ಕೋಶಾಧಿಕಾರಿ ಮೋಹನ್ ದಾಸ ವಾಮಂಜೂರು, ಜತೆ ಕಾರ್ಯದರ್ಶಿ ಜಯ ವಿಕ್ರಮ್, ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಕಾನೂನು ಸಲಹೆಗಾರ ನವನೀತ್ ಹಿಂಗಾಣಿ, ಅಲ್ಪಸಂಖ್ಯಾತ ಇಲಾಖೆ ಅಧಿಕಾರಿ ಜೀನೇಂದ್ರ ಕೋಟ್ಯಾನ್, ಆಯುಸ್ಮಾನ್ ಇಲಾಖೆ ಅಧಿಕಾರಿ ಜಗನ್ನಾಥ್ ಶಿರ್ಲಾಲು , ಕೆ.ಪಿ.ಸಿ ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಬೆಳ್ತಂಗಡಿ, ದಕ್ಷಿಣ ಕನ್ನಡ ಜಿಲ್ಲಾ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೊರ್ಚಾದ ವಸಂತ ಪೂಜಾರಿ, ಮಂಗಳೂರಿನ ಮಹಾನಗರ ಪಾಲಿಕೆ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಜಯರಾಮಂ ಬಂಗೇರ ಹೇರಾಜೆ ರಾಜೇಂದ್ರ ಚಿಲಿಂಬಿ, ಚಂದ್ರಹಾಸ ಅಮೀನ್, ಸುಜಿತ ಬಂಗೇರ, ಶಶಿಧರ ಕಿನ್ನಿಮಜಲು, ನಾರಾಯಣ ಮಚ್ಚಿನ, ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಅಮಿತ್ ರಾಜ್, ಭಜರಂಗದಳದ ಸಂಚಾಲಕರಾದ ದೀಕ್ಷಿತ್ ಅಶೋಕ್ ನಗರ, ಪುತ್ತೂರು ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ,ಬಿ.ಎಸ್.ಎನ್.ಎಲ್ ದಕ್ಷಿಣ ಕನ್ನಡ ಜಿಲ್ಲಾ ಸಲಹಾ ಸಮಿತಿಯ ಸದಸ್ಯರಾದ ನಿತೀಶ್ ಶಾಂತಿವನ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಸನ್ನ ಮಾಡ್ತಾ, ವಿದ್ಯಾಧರ ಜೈನ್, ನೆಟ್ಟಣಿಗೆ ಮಹಾ ಶಕ್ತಿಕೇಂದ್ರದ ಅಧ್ಯಕ್ಷ ರಾಜೇಶ್ ರೈ, ಪರ್ಪುಂಜ ಉಪಸ್ಥಿತರಿದ್ದರು.