ಮಾ.6:ನಯಾ ಚಪ್ಪಲ್ ಬಜಾರ್ ನವೀಕೃತಗೊಂಡು ಪ್ರಥಮ ವಾರ್ಷಿಕೋತ್ಸವ

0

ವಾರ್ಷಿಕೋತ್ಸವದ ನಿಮಿತ್ತ ಗ್ರಾಹಕರಿಗೆ ಒಂದು ದಿನದ ವಿಶೇಷ ಭರ್ಜರಿ ಆಫರ್

ಪುತ್ತೂರು:ದರ್ಬೆ ಬುಶ್ರಾ ಕಾಂಪ್ಲೆಕ್ಸ್‌ನಲ್ಲಿ ಕಳೆದ 29 ವರ್ಷಗಳಿಂದ ಹವಾನಿಯಂತ್ರಿತ ಪಾದರಕ್ಷೆ ಮಳಿಗೆ ನಯಾ ಚಪ್ಪಲ್ ಬಜಾರ್ ಮೂಲಕ ವ್ಯವಹರಿಸುತ್ತಾ ಬಂದಿರುವ ಈ ಮಳಿಗೆಯು ಕಳೆದ ವರ್ಷ ನವೀಕೃತಗೊಂಡು ಮಾ.6 ರಂದು ಪ್ರಥಮ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು ವಾರ್ಷಿಕೋತ್ಸವದ ಪ್ರಯುಕ್ತ ಮಳಿಗೆಯು ಒಂದು ದಿನದ ವಿಶೇಷ ಆಫರ್ ಅನ್ನು ಗ್ರಾಹಕ ಬಂಧುಗಳಿಗೆ ನೀಡುತ್ತಿದೆ. 

ವಾರ್ಷಿಕೋತ್ಸವದ ಪ್ರಯುಕ್ತ ಭರ್ಜರಿ ಆಫರ್:
ನಯಾ ಚಪ್ಪಲ್ ಬಜಾರ್ ಮಳಿಗೆಯು ಸ್ವಾತಂತ್ರ್ಯ ದಿನಾಚರಣೆ, ಮಕ್ಕಳ ದಿನಾಚರಣೆ, ಕಾರ್ಮಿಕರ ದಿನಾಚರಣೆ, ಕಾರ್ಗಿಲ್ ದಿನಾಚರಣೆ, ಹಿರಿಯರ ದಿನಾಚರಣೆ ಹೀಗೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರ್ಹ ಫಲಾನುಭವಿಗಳನ್ನು ಗುರುತಿಸಿ ಸನ್ಮಾನಿಸುವ ಮೂಲಕ `ಗ್ರಾಹಕ ಸ್ನೇಹಿ’ ಮಳಿಗೆಯಾಗಿ ರೂಪುಗೊಂಡಿದೆ. ಇದೀಗ ಮಳಿಗೆಯ ಪ್ರಥಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಗ್ರಾಹಕರಿಗೆ ವಾರ್ಷಿಕೋತ್ಸವದ ಪ್ರಯುಕ್ತ ಮತ್ತಷ್ಟು ಆಫರ್‌ಗಳನ್ನು ನೀಡಲು ಬಯಸಿದೆ. ಮಳಿಗೆಗೆ ಆಗಮಿಸಿದ ಗ್ರಾಹಕರಿಗೆ ವರ್ಷದ ಗ್ರಾಹಕ ಆವಾರ್ಡ್, ಅರ್ಹ ಸಾಧಕರಿಗೆ ಸನ್ಮಾನ, ರೋಟರಿ ಕ್ಲಬ್, ರೋಟರ್‍ಯಾಕ್ಟ್ ಕ್ಲಬ್ ಸಹಭಾಗಿತ್ವದಲ್ಲಿ ಅಂಗನವಾಡಿ ಮಕ್ಕಳಿಗೆ ಪಾದರಕ್ಷೆ ವಿತರಣೆ, ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ನಾಮ ಫಲಕ ಕೊಡುಗೆ, ಸಾರ್ವಜನಿಕ ಶುದ್ಧ ಕುಡಿಯುವ ನೀರಿನ ಯೋಜನೆ, ಸ್ಥಳದಲ್ಲೇ ಕ್ವಿಜ್, ಸ್ಥಳದಲ್ಲೇ ಬಹುಮಾನ ಹೀಗೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಮಳಿಗೆಯು ಹಮ್ಮಿಕೊಂಡಿದೆ. ಇದರ ಜೊತೆಗೆ ಮಳಿಗೆಗೆ ಆಗಮಿಸುವ ಗ್ರಾಹಕ ಬಂಧುಗಳಿಗೆ ಚಿನ್ನದ ನಾಣ್ಯ ವಿಜೇತರಾಗುವ ಅವಕಾಶವನ್ನು ಮಳಿಗೆಯು ಒದಗಿಸಿಕೊಟ್ಟಿದೆ.

ಈ ಕಾರ್ಯಕ್ರಮದಲ್ಲಿ ಪುತ್ತೂರು ತಹಶೀಲ್ದಾರ್ ಪುರಂದರ, ರೋಟರಿ ಕ್ಲಬ್ ಪುತ್ತೂರು ಕಾರ್ಯದರ್ಶಿ ದಾಮೋದರ್ ಕೆ.ಎ, ರೋಟರಿ ಕ್ಲಬ್ ಪುತ್ತೂರು ಮಾಜಿ ಅಧ್ಯಕ್ಷರಾದ ಆಸ್ಕರ್ ಆನಂದ್, ಭುಜಂಗ ಆಚಾರ್ಯ, ಮಂಗಳೂರು ಫರ್ನಿಚರ್‍ಸ್ ಮಾಲಕ ಇಸ್ಮಾಯಿಲ್, ರೋಟರ್‍ಯಾಕ್ಟ್ ಕ್ಲಬ್ ಪುತ್ತೂರು ಅಧ್ಯಕ್ಷ ಸುಬ್ರಮಣಿರವರು ಭಾಗವಹಿಸಲಿದ್ದಾರೆ ಎಂದು ಮಳಿಗೆಯ ಪಾಲುದಾರ ರಫೀಕ್ ಎಂ.ಜಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

LEAVE A REPLY

Please enter your comment!
Please enter your name here