ಪುತ್ತೂರು: ರೆಂಜಲಾಡಿ ಬದ್ರಿಯಾ ಜುಮಾ ಮಸೀದಿಯಲ್ಲಿ ಈದುಲ್ ಫಿತ್ರ್ ಆಚರಿಸಲಾಯಿತು. ಖುತುಬಾ ನಿರ್ವಹಿಸಿ ನಮಾಜಿಗೆ ನೇತೃತ್ವ ನೀಡಿದ ಸ್ಥಳೀಯ ಖತೀಬ್ ನಾಸಿರ್ ಫೈಝಿ ಮಾತನಾಡಿ ಐಕ್ಯತೆ ಮತ್ತು ಸಹೋದರ್ಯತೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳಬೇಕು, ಮನಸ್ಸಲ್ಲಿ ದ್ವೇಷ, ಅಸೂಯೆ ಇಟ್ಟು ಮೇಲ್ನೋಟಕ್ಕೆ ತೋರ್ಪಡಿಕೆಗೆ ಮಾಡುವ ಪ್ರೀತಿ, ಸ್ನೇಹಚಾರಕ್ಕೆ ಯಾವುದೇ ಅರ್ಥವಿಲ್ಲ ಎಂದು ಹೇಳಿದರು.
ಆರ್.ಐ.ಸಿ ಚೇರ್ ಮೆನ್ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಮಾತನಾಡಿ ತಂದೆ ತಾಯಿಯನ್ನು ಪ್ರೀತಿಸುವ, ಗೌರವಿಸುವ, ಅವರ ಅವಶ್ಯ ಕತೆಗಳನ್ನು ಪೂರೈಸುವ ಮಕ್ಕಳು ಭಾಗ್ಯವಂತರು, ತಂದೆ ತಾಯಿಯನ್ನು ನಿರ್ಲಕ್ಷಿಸುವವರ ಯಾವ ಸತ್ಕರ್ಮವನ್ನೂ ಅಲ್ಲಾಹು ಸ್ವೀಕರಿಸಲಾರ ಎಂದು ಹೇಳಿದರು.
ಎ.3ರಂದು ಉಮ್ರಾ ಯಾತ್ರೆ ಕೈಗೊಳ್ಳಲಿರುವ ಇಬ್ರಾಹಿಂ ಕಡ್ಯ ಮತ್ತು ರಹೀಮ್ ರೆಂಜಲಾಡಿ ಅವರನ್ನು ಜಮಾಅತ್ ಕಮಿಟಿ ವತಿಯಿಂದ ಶಾಲು ಹೊದಿಸಿ, ಸನ್ಮಾನಿಸಿ ಬೀಳ್ಕೊಡಲಾಯಿತು.
ಸದರ್ ಉಸ್ತಾದ್ ಅಬೂಬಕ್ಕರ್ ಮುಸ್ಲಿಯಾರ್ ಹಾಗೂ ಜಮಾಅತ್ ಕಮಿಟಿ ಪದಾಧಿಕಾರಿಗಳು, ಜಮಾಅತರು ಉಪಸ್ಥಿತರಿದ್ದರು.