ಪುತ್ತೂರು: ರೈಲ್ವೇ ನಿಲ್ದಾಣದಲ್ಲಿ ಶೀಟ್ ಬಿದ್ದು ಪ್ರಯಾಣಿಕರಿಬ್ಬರಿಗೆ ಗಾಯ

0

ಪುತ್ತೂರು: ಕಬಕ ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ನವೀಕರಕಣ ಕಾರ್ಯಗಳು ನಡೆಯುತ್ತಿದ್ದು, ಪ್ರಯಾಣಿಕರ ಮೇಲ್ಸೆತುವೆಯಲ್ಲಿ ತೆಗೆದಿಟ್ಟ ಹಳೆ ತಗಡು ಶೀಟೊಂದು ಇಬ್ಬರು ಮಹಿಳಾ ಪ್ರಯಾಣಿಕರ‌ ಮೇಲೆ ಬಿದ್ದು ಗಾಯಗೊಂಡ ಘಟನೆ ಎ.13ರಂದು ನಡೆದಿದೆ.

ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

ಸೂಕ್ತ ಚಿಕಿತ್ಸೆ ನೀಡುವಂತೆ ಶಾಸಕ ಅಶೋಕ್ ರೈ ಸೂಚನೆ
ಗಾಯಾಳುಗಳಿಗೆ ಸೂಕ್ತ‌ಚಿಕಿತ್ಸೆ ಕೊಡಿಸುವಂತೆ ರೈಲ್ವೇ ಅಧಿಕಾರಿಗೆ ಶಾಸಕ ಅಶೋಕ್ ರೈ ಸೂಚನೆ ನೀಡಿದ್ದಾರೆ.ಗಾಯಾಳುಗಳ ಚಿಕಿತ್ಸೆ ವ್ಯವಸ್ಥೆ ಮತ್ತು ಇಲಾಖೆಯಿಂದ ಸೂಕ್ತ ಪರಿಹಾರವನ್ನು ನೀಡುವಂತೆ ಅಧಿಕಾರಿ‌ ಮಿಶ್ರಾ ಅವರಿಗೆ ಶಾಸಕರು ಸೂಚನೆ ನೀಡಿದ್ದಾರೆ. ಶಾಸಕರ ಸೂಚನೆಯಂತೆ ರೈಲ್ವೇ ಇಲಾಖೆ ಗಾಯಾಳುಗಳಿಗೆ‌ ಚಿಕಿತ್ಸೆ ಮತ್ತು ಪರಿಹಾರ ನೀಡಲು ಒಪ್ಪಿಕೊಂಡಿದೆ.

LEAVE A REPLY

Please enter your comment!
Please enter your name here