ಮಂಗಳೂರು: ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್, ದಕ್ಷಿಣ ಕನ್ನಡ ಘಟಕವು ಏ.18 ರಂದು ನಡೆದ ಪದಗ್ರಹಣ ಸಂದರ್ಭದಲ್ಲಿ ಚುಟುಕು ರಚನೆಯ ಸ್ಪರ್ಧೆಯನ್ನು ಆಯೋಜಿಸಿತ್ತು.
ಜಿಲ್ಲೆಯ ಒಟ್ಟು 32 ಚುಟುಕು ಕವಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಈ ಸ್ಪರ್ಧೆಯಲ್ಲಿ ನಿರ್ಮಲ ಸುರತ್ಕಲ್, ಗೀತಾ ಎನ್ ನರಿಕೊಂಬು, ಡಾ.ಸುಮತಿ ಪಿ.,ಪುತ್ತೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಅಬ್ದುಲ್ ಸಮದ್ ಬಾವ ಮತ್ತು ದಯಾವತಿ ಚರಂತಿಮಠ ಇವರು ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಕಾವ್ಯ ಪ್ರಶಸ್ತಿಯ ಜೊತೆಗೆ ಸ್ಮರಣಿಕೆ ಮತ್ತು ಪ್ರಮಾಣ ಪತ್ರ ಪಡೆಯಲು ಆಯ್ಕೆಯಾಗಿದ್ದಾರೆ. ಭಾಗವಹಿಸಿದ ಎಲ್ಲಾ ಕವಿಗಳು ಪುಸ್ತಕ ಬಹುಮಾನಕ್ಕೆ ಭಾಜನರಾಗಿದ್ದಾರೆ ಎಂದು ಸ್ಥಾಪಕ ಅಧ್ಯಕ್ಷ ಡಾ.ವಾಮನರಾವ್ ಬೇಕಲ್ ತಿಳಿಸಿದ್ದಾರೆ.