ಪುತ್ತೂರು: ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಪುತ್ತೂರು ತಾಲೂಕು ಸಮಿತಿ, ಮಹಿಳಾ, ಯುವ ಹಾಗೂ ವಿದ್ಯಾರ್ಥಿ ಬಂಟರ ವಿಭಾಗ ಪುತ್ತೂರು ಇವರ ಸಹಕಾರದಲ್ಲಿ ಆ.17 ರಂದು ಕೈಕಾರ ಪನಡ್ಕ ಪಳ್ಳತ್ತಾರು ಶ್ರೀ ಜುಮಾದಿ ದೈವಸ್ಥಾನದ ಹತ್ತಿರ ಸರಸ್ವತಿ ಹೊಸಲಕ್ಕೆ ಇವರ ಗದ್ದೆಯಲ್ಲಿ ನಡೆಯಲಿರುವ “ಬಂಟೆರೆ ಕೆಸರ್ಡ್ ಒಂಜಿ ಕುಸಲ್” ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆಯು ಜು.3 ರಂದು ಪುತ್ತೂರು ಬಂಟರ ಭವನದಲ್ಲಿ ಜರಗಿತು.
ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಕೋಶಾಧಿಕಾರಿ ಸಂತೋಷ್ ಶೆಟ್ಟಿ, ನಿರ್ದೇಶಕರಾದ “ಸಹಕಾರರತ್ನ” ದಂಬೆಕ್ಕಾನ ಸದಾಶಿವ ರೈ, ರವಿಪ್ರಸಾದ್ ಶೆಟ್ಟಿ ಬನ್ನೂರು, “ಬಂಟೆರೆ ಕೆಸರ್ಡ್ ಒಂಜಿ ಕುಸಲ್” ಕಾರ್ಯಕ್ರಮದ ಸಂಚಾಲಕ ದಯಾನಂದ ರೈ ಕೋರ್ಮಂಡ, ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ, ಬೆಂಗಳೂರು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಯೋಗ್ಯ ರೈ, ಉದ್ಯಮಿ ಭಾಗ್ಯ ಶೆಟ್ಟಿ, ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ, ಕಾರ್ಯದರ್ಶಿ ಕುಸುಮಾ ಪಿ.ಶೆಟ್ಟಿ, ಕೋಶಾಧಿಕಾರಿ ಅರುಣಾ ಡಿ.ರೈ, ನಿಕಟಪೂರ್ವಧ್ಯಕ್ಷೆ ಸಬಿತಾ ಭಂಡಾರಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಪತ್ರಕರ್ತೆ ಹೇಮಾ ಜೆ.ರೈ, ಯುವ ಬಂಟರ ಸಂಘದ ವಿಭಾಗದ ಹರ್ಷಕುಮಾರ್ ರೈ, ಕಾರ್ಯದರ್ಶಿ ರಂಜಿನಿ ಶೆಟ್ಟಿ, ವಿದ್ಯಾರ್ಥಿ ಬಂಟರ ವಿಭಾಗದ ಅಧ್ಯಕ್ಷ ಪವನ್ ಶೆಟ್ಟಿ ಉಪಸ್ಥಿತರಿದ್ದರು.