ಪುತ್ತೂರು: ಲಾರಿ ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ನೆಹರುನಗರ ಕಲ್ಲೇಗ ಸಮೀಪ ಸೆ.4ರಂದು ನಡೆದಿದೆ.
ಸ್ಕೂಟರ್ ಸವಾರ ಕಲ್ಲೇಗ ನಿವಾಸಿ ಚಂದ್ರಶೇಖರ್ ಅವರು ಗಾಯಗೊಂಡವರು. ಅವರು ಕಲ್ಲೇಗ ಮನೆಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಸಂದರ್ಭ ಅವರಿಗೆ ಲಾರಿ ಡಿಕ್ಕಿ ಹೊಡೆದಿದೆ. ಗಾಯಗೊಂಡ ಚಂದ್ರಶೇಖರ್ ಅವರನ್ನು ಮಹಾವೀರ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.