






ಉಪ್ಪಿನಂಗಡಿ: ಆಲ್ ಇಂಡಿಯಾ ಡಿಸೈನ್ ಆಪ್ಟಿಟ್ಯೂಡ್ ಪರೀಕ್ಷೆಯಲ್ಲಿ ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ರುಚಿಕ ಇವರು ಉನ್ನತ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿ ಉನ್ನತ ವ್ಯಾಸಂಗಕ್ಕೆ ಆಯ್ಕೆಯಾಗಿದ್ದಾರೆ.


ಇವರು ಕಡೇಶಿವಾಲಯ ನಿವಾಸಿ ಶ್ರೀಮತಿ ಭಾರತಿ ಮತ್ತು ಲೋಕನಾಥ್ ಪೂಜಾರಿ ಟಿ. ದಂಪತಿಯ ಪುತ್ರಿ. ಇವರ ಈ ಸಾಧನೆಗೆ ಸಂಸ್ಥೆಯ ಪ್ರಾಂಶುಪಾಲ ಎಚ್.ಕೆ. ಪ್ರಕಾಶ್ ಅಭಿನಂದನೆ ಸಲ್ಲಿಸಿದ್ದಾರೆ.













