






ಅಧ್ಯಕ್ಷರಾಗಿ ಕುಶಾಲಪ್ಪ ಕೋಡಿ, ಉಪಾಧ್ಯಕ್ಷರಾಗಿ ಅನೀಸಾ


ನಿಡ್ಪಳ್ಳಿ; ದ.ಕ.ಜಿ.ಪಂ ಹಿರಿಯ ಪ್ರಾಥಮಿಕಶಾಲೆ ಕಕ್ಕೂರು ಬೆಟ್ಟಂಪಾಡಿ ಇಲ್ಲಿಯ ಎಸ್. ಡಿ ಎಂ.ಸಿಯ ತೆರವಾದ ಸ್ಥಾನಕ್ಕೆ ಜೂ.18 ರಂದು ಆಯ್ಕೆ ಪ್ರಕ್ರಿಯೆ ನಡೆಯಿತು. ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ಡಾ. ಧರ್ಮಪಾಲ್ ಮತ್ತು ಕಾರ್ಯದರ್ಶಿ ಎಂ ಶಿವರಾಮ ಮೂಲ್ಯ ಇವರ ಉಪಸ್ಥಿತಿಯಲ್ಲಿ ಆಯ್ಕೆ ನಡೆಸಲಾಯಿತು.



ಅಧ್ಯಕ್ಷರಾಗಿ ಕುಶಾಲಪ್ಪ ಕೋಡಿ ಮತ್ತು ಉಪಾಧ್ಯಕ್ಷರಾಗಿ ಅನೀಸಾ ಹಾಗೂ ತೆರವಾದ ಸದಸ್ಯ ಸ್ಥಾನಕ್ಕೆ ಶಿವಪ್ರಸಾದ್, ಮಿಶ್ರಿಯ, ಸುಲೋಚನಾ ಇವರು ಆಯ್ಕೆಯಾದರು. ಶಾಲಾ ಮುಖ್ಯ ಶಿಕ್ಷಕಿ ಪಾರ್ವತಿ ಕಜೆ ಮತ್ತು ಸಹ ಶಿಕ್ಷಕಿಯರು ಸಹಕರಿಸಿದರು.










