ಬನ್ನೂರು ಬಲಮುರಿ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಬೊಳುವಾರಿನ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದಿಂದ ‘ಯಕ್ಷಶ್ರಾವಣ – 2’ ಯಕ್ಷಗಾನ ತಾಳಮದ್ದಳೆ ಬನ್ನೂರಿನ ಶ್ರೀ ಬಲಮುರಿ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಭೀಷ್ಮ ವಿಜಯ’ ದೊಂದಿಗೆ ಆ.18ರಂದು ನಡೆಯಿತು.


ಹಿಮ್ಮೇಳದಲ್ಲಿ ಭಾಗವತರಾಗಿ ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್, ಸತೀಶ ಇರ್ದೆ ಹಾಗೂ ಚೆಂಡೆ ಮದ್ದಲೆಗಳಲ್ಲಿ ಪಿ. ಟಿ. ಜಯರಾಮ ಭಟ್, ಸಮರ್ಥ ವಿಷ್ಣು ಕಡಂಬಳಿಕೆ ಭಾಗವಹಿಸಿದರು. ಮುಮ್ಮೇಳದಲ್ಲಿ ಭೀಷ್ಮನಾಗಿ ಗುಂಡ್ಯಡ್ಕ ಈಶ್ವರ ಭಟ್, ಅಂಬೆಯಾಗಿ ಭಾಸ್ಕರ ಬಾರ್ಯ, ಪರಶುರಾಮನ ಪಾತ್ರದಲ್ಲಿ ಗುಡ್ಡಪ್ಪ ಬಲ್ಯ, ವೃದ್ಧಬ್ರಾಹ್ಮಣನಾಗಿ ಮಾಂಬಾಡಿ ವೇಣುಗೋಪಾಲ ಭಟ್, ಸಾಲ್ವನಾಗಿ ಬಡೆಕ್ಕಿಲ ಚಂದ್ರಶೇಖರ ಭಟ್ ಪಾತ್ರಪೋಷಣೆ ಮಾಡಿದರು. ಭಾಸ್ಕರ ಬಾರ್ಯರ ಸಂಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಮಾಂಬಾಡಿ ವೇಣುಗೋಪಾಲ್ ಭಟ್ ಪ್ರಾಯೋಜಿಸಿದರು. ಭಾಸ್ಕರ ಬಾರ್ಯ ಸ್ವಾಗತಿಸಿ, ದೇವಳದ ಪ್ರಬಂಧಕ ಸುಬ್ರಹ್ಮಣ್ಯ ಭಟ್ ವಂದಿಸಿದರು.

LEAVE A REPLY

Please enter your comment!
Please enter your name here