






ಪುತ್ತೂರು: ಉಪ್ಪಿನಂಗಡಿಯಲ್ಲಿ ಸೆ.6 ರಂದು ನಡೆದ ಯುನೈಟೆಡ್ ಕರಾಟೆ ಬುಡೋಕನ್ ಇಂಟರ್ ನ್ಯಾಷನಲ್ ನಡೆಸಿದ ನ್ಯಾಷನಲ್ ಲೆವೆಲ್ ಒಪನ್ ಕರಾಟೆ ಚಾಂಪಿಯನ್ 2026ರ ಸ್ಪರ್ಧೆಯಲ್ಲಿ ವಿದ್ಯಾರಶ್ಮಿ ವಿದ್ಯಾಲಯದ 7ನೇ ತರಗತಿಯ ಉದಯ್ ಶೆಟ್ಟಿ ಕಟ ಪ್ರಥಮ ಸ್ಥಾನ, ಕುಮಿಟಿ ತೃತೀಯ ಸ್ಥಾನ, 5ನೇ ತರಗತಿಯ ಪೃಥ್ವಿ ಎಸ್ ಕುಮಿಟಿ ದ್ವಿತೀಯ ಸ್ಥಾನ, ಕಟ ತೃತೀಯ ಸ್ಥಾನ, 9ನೇ ತರಗತಿಯ ಪುನೀತ್ ಶೆಟ್ಟಿ ಕಟ ತೃತೀಯ ಸ್ಥಾನ, 6ನೇ ತರಗತಿಯ ಮುಹಮ್ಮದ್ ಲಿಬ್ಝ್ ಕಟ ತೃತೀಯ ಸ್ಥಾನ, 3ನೇ ತರಗತಿ ಅವಿ ಅಶ್ವಿನ್ ಶೆಟ್ಟಿ ಕಟ ತೃತೀಯ ಸ್ಥಾನ ಪಡೆದಿದ್ದಾರೆ.


ಅವಿ ಅಶ್ವಿನ್ ಶೆಟ್ಟಿ ವೈಯಕ್ತಿಕ ಕಟ ಪ್ರಥಮ ಸ್ಥಾನ ಮತ್ತು ವೈಯಕ್ತಿಕ ಕುಮ್ಟಿ ಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.3ನೇ ತರಗತಿಯ ತನಯ್ ಡಿ ಕೆ ವೈಯಕ್ತಿಕ ಕಟ ದ್ವಿತೀಯ ಸ್ಥಾನ ಮತ್ತು ವೈಯಕ್ತಿಕ ಕುಮ್ಟಿ ತೃತೀಯ ಸ್ಥಾನ ಪಡೆದಿದ್ದಾರೆ. ಕರಾಟೆ ತರಬೇತುದಾರರಾದ ದಿನೇಶ್ ರವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಇವರಿಗೆ ಸಂಸ್ಥೆಯ ಸಂಚಾಲಕರಾದ ಸವಣೂರು ಸೀತಾರಾಮ ರೈ ಕೆ ಆಡಳಿತಾಧಿಕಾರಿ ಅಡ್ವಕೇಟ್ ಅಶ್ವಿನ್ ಎಲ್ ಶೆಟ್ಟಿ, ಪ್ರಾಂಶುಪಾಲರು ಮತ್ತು ಬೋಧಕ ಬೋಧಕೆತರ ವೃಂದದವರು ಅಭಿನಂದಿಸಿದರು.













