ಪುತ್ತೂರು ಟಾಟಾ ಎಐಎ ಲೈಫ್ ಇನ್ಸೂರೆನ್ಸ್ ಕಚೇರಿಯಲ್ಲಿ ಗುರು ವಂದನೆ-ಸನ್ಮಾನ ಕಾರ‍್ಯಕ್ರಮ

0

ಪುತ್ತೂರು: ಟಾಟಾ ಎಐಎ ಲೈಫ್ ಇನ್ಸೂರೆನ್ಸ್ ಸಂಸ್ಥೆಗೆ 25 ರ‍್ಷ ಪೂರೈಸಿದ ಸಂಭ್ರಮದ ಪ್ರಯುಕ್ತ ಹಾಗೂ ಶಿಕ್ಷಕರ ದಿನಾಚರಣೆಯ ಅಂಗವಾಗಿ, ಸೆ. 5 ರಂದು ಪುತ್ತೂರಿನ ಎಲ್ಮುಡಿಯಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ವಿಶೇಷ ‘ಗುರು ವಂದನೆ’ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

​ಈ ಸಂದರ್ಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಪುತ್ತೂರು ತಾಲೂಕಿನ ಒಟ್ಟು 35 ಶಿಕ್ಷಕ-ಶಿಕ್ಷಕಿಯರನ್ನು ಗೌರವಿಸಿ, ಸನ್ಮಾನಿಸಲಾಯಿತು.ಕಾರ‍್ಯಕ್ರಮದಲ್ಲಿ ಟಾಟಾ AIA ಸಂಸ್ಥೆಯ ಸ್ಟೇಟ್ ಹೆಡ್ ಟ್ರೈನರ್ ದಿವ್ಯ ಶೆಟ್ಟಿ ಹಾಗೂ ಕ್ಲಸ್ಟರ್ ಹೆಡ್ ಪ್ರತೀಕ್ ಅವರು ಮುಖ್ಯ ಉಪಸ್ಥಿತರಿದ್ದು ಶುಭ ಹಾರೈಸಿದರು.

​ಬ್ರಾಂಚ್ ಮ್ಯಾನೇಜರ್ ಜೋಲ್ಸನ್ ಗೊನ್ಸಲ್ವೆಸ್ ಅವರು ಕರ‍್ಯಕ್ರಮ ನಿರೂಪಿಸಿದರು. ಶ್ರುತಿ ನವೀನ್ ಶಂಕರ್ ಅವರು ಆಗಮಿಸಿದ ಅತಿಥಿಗಳನ್ನು ಹಾಗೂ ಶಿಕ್ಷಕರನ್ನು ಸ್ವಾಗತಿಸಿದರು. ಸುರೇಶ ಕುಮಾರ್ ತಿಂಗಳಾಡಿ ವಂದಿಸಿದರು.



​ಶಿಕ್ಷಕರ ಸನ್ಮಾನ ಕಾರ‍್ಯಕ್ರಮವನ್ನು ಸಂಸ್ಥೆಯ ಬ್ರಾಂಚ್ ಲೀಡರ್ ಗಳಾದ ರೂಪವತಿ ರೈ, ಶ್ರುತಿ ನವೀನ್ ಶಂಕರ್, ಸುರೇಶ್ ಕುಮಾರ್, ವೀಣಾ B. K., ಸುಷ್ಮಾ ಭಟ್, ಪ್ರವೀಣ್ ಶಂಕರ್, ಪ್ರಸಾದ್ ರೈ ಹಾಗೂ ಸುಬ್ರಮಣಿ ಅವರು ನೆರವೇರಿಸಿ ಗೌರವ ಸಲ್ಲಿಸಿದರು.



​ಕಾರ‍್ಯಕ್ರಮದ ಯಶಸ್ಸಿಗೆ ಬ್ರಾಂಚಿನ ಅಸಿಸ್ಟೆಂಟ್ ಮ್ಯಾನೇಜರ್ ರಾಘವೇಂದ್ರ ಮತ್ತು ಸಿಬ್ಬಂದಿಗಳಾದ ವೀಣಾ, ದೀಕ್ಷಿತ್ ಹಾಗೂ ಪುನೀತ್ ಸಹಕರಿಸಿದರು.

LEAVE A REPLY

Please enter your comment!
Please enter your name here