ವಿಟ್ಲ: ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಸುದರ್ಶನ್ ಕುದುಂಬ್ಲಾಡಿರವರ ‘ಶ್ರೀಚಕ್ರ ನಿಲಯ’ದಲ್ಲಿ ನ.20ರಂದು ಸಾಯಂಕಾಲ ಮಂತ್ರದೇವತೆ ದೈವದ ಗಗ್ಗರಸೇವೆ ನಡೆಯಿತು.
ಯೋಗೀಶ್ ಭಟ್ ಚಿಂಥನೆ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ವಿ.ಎಸ್. ಭಟ್, ಶ್ರಿ ಕ್ಷೇತ್ರ ಕೊಲ್ಲಾಂಗಾನದ ತಂತ್ರಿಗಳಾದ ಬ್ರಹ್ಮಶ್ರೀ ಗಣಾದಿರಾಜ ಉಪಾದ್ಯಾಯ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಮಾಜಿ ಸೈನಿಕರಾದ ಜನಾರ್ದನ ಕುಲಾಲ್, ಪ್ರಮುಖರಾದ ಗಣರಾಜ್ ಭಟ್ ಕೆದಿಲ, ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘದ ಅದ್ಯಕ್ಷ ರಾದ ಪದ್ಮನಾಭ ಭಟ್, ಬೀಡಿನ ಮಜಲು ಕ್ಷೇತ್ರದ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ಭಟ್, ಕಲ್ಲಾಜೆಗುತ್ತು ಪ್ರವೀಣ್ ಚಂದ್ರ ಶೆಟ್ಟಿ, ಕೆದಿಲ ದೂಮಾವತಿ ಮಲರಾಯ ದೈವಸ್ಥಾನದ ಮಾಜಿ ಅಧ್ಯಕ್ಷರಾದ ಭೀಮ್ ಭಟ್, ಸಂತೋಷ್ ಭಟ್ ಚಿಂಥನೆ ಸೇರಿದಂತೆ ಊರಪರವೂರ ನೂರಾರು ಗಣ್ಯರು ಉಪಸ್ಥಿತರಿದ್ದರು. ಸುದರ್ಶನ್ ಕುದುಂಬ್ಲಾಡಿ ಹಾಗೂ ಸುರೇಖಾ ಸುದರ್ಶನ್ ದಂಪತಿಗಳು ಅತಿಥಿಗಳನ್ನು ಬರಮಾಡಿಕೊಂಡರು.