“ನಮ್ಮ ಪ್ರಧಾನಿಗ್ ತುಳುವೆರೆ ಪೋಸ್ಟ್ ಕಾರ್ಡ್” ಅಭಿಯಾನಕ್ಕೆ ಚಾಲನೆ:ತುಳುವೆರೆ ಪಕ್ಷದಿಂದ ಸಂಪೂರ್ಣ ಬೆಂಬಲ: ಬಂಜಾರ್ ಮಲೆಯಿಂದ ಅಭಿಯಾನಕ್ಕೆ ಐತಿಹಾಸಿಕ ಚಾಲನೆ

0

ಬೆಳ್ತಂಗಡಿ : “ನಮ್ಮ ಪ್ರಧಾನಿಗ್ ತುಳುವೆರೆ ಪೋಸ್ಟ್ ಕಾರ್ಡ್” ಅಭಿಯಾನವನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಡಿ ಪ್ರದೇಶವಾದ ಬಂಜಾರು ಮಲೆಯ ತುಳುನಾಡಿನ ಮೂಲ ಜನಾಂಗದ ಆದಿವಾಸಿಗಳು ವಾಸಿಸುವಂತಹ ಪ್ರದೇಶದಲ್ಲಿ ತುಳುವೆರೆ ಪಕ್ಷ ಅಧ್ಯಕ್ಷರು ಶೈಲೇಶ್ ಆರ್.ಜೆ. ಸೆ.1 ರಂದು ಉದ್ಘಾಟಿಸುವ ಮೂಲಕ ಅಭಿಯಾನಕ್ಕೆ ಚಾಲನೆ  ನೀಡಿದರು.

ಮೂಲ ಜನಾಂಗದ ಪ್ರದೇಶವಾದ ಬಂಜಾರು ಮಲೆಯಿಂದ ಸಾಂಕೇತಿಕವಾಗಿ ಈ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಬಂಜಾರು ಮಲೆಯ ಮೂಲಜನಾಂಗದವರು ತುಳು ಭಾಷೆಯ ಮಾನ್ಯತೆಗಾಗಿ ನಡೆಯುವ ಪೋಸ್ಟ್ ಕಾರ್ಡ್ ಅಭಿಯಾನಕ್ಕೆ ತಮ್ಮ ಬೆಂಬಲವಿದೆ ಎಂದು ತಿಳಿಸಿದರು. ನಮ್ಮ ಮಾತೃ ಭಾಷೆಯಾದ ತುಳುವಿಗೆ ಸರಕಾರದಿಂದ ಮಾನ್ಯತೆ ದೊರಕಬೇಕು ಎಂದು ತಿಳಿಸಿ ಎಲ್ಲಾ ಮನೆಗಳಿಂದ ಪೋಸ್ಟ್ ಕಾರ್ಡ್ ಬರೆಯುವ ಮುಖಾಂತರ ಈ ಅಭಿಯಾನಕ್ಕೆ ಚಾಲನೆ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ತುಳುವೆರ್ ಕುಡ್ಲ(ರಿ) ಸಂಘಟನೆಯ ಅಧ್ಯಕ್ಷ ಪ್ರತೀಕ್ ಯು. ಪೂಜಾರಿ, ಉಪಾಧ್ಯಕ್ಷ ಸಂತೋಷ್ ಮತ್ತು ಸದಸ್ಯರಾದ ಪ್ರಜ್ವಲ್, ಸಮಾಜ ಸೇವಕ ಪ್ರವೀಣ್  ಹಾಗೂ ಮಹಿಳಾ ವಿಭಾಗದ ಅಧ್ಯಕ್ಷೆ ಪೂಜಾ ಶೆಟ್ಟಿ, ಸದಸ್ಯರಾದ ನಿಕ್ಷಿತಾ, ತುಳುನಾಡು ವಾರ್ತೆ ವಾರ ಪತ್ರಿಕೆಯ ಸಂಪಾದಕರಾದ ಪುನೀತ್, ಮತ್ತು ತುಳುವೆರ್ ಪಕ್ಷದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here