ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಪೇಟೆಯಲ್ಲಿ ಹೊಸ ತೆನೆ ಗಳನ್ನು ಆಶೀರ್ವಾದಿಸಿ ಮೆರವಣಿಗೆಗೆ ಚಾಲನೆ ನೀಡಿದ ಮುಖ್ಯ ಗುರುಗಳು ಸ್ವಾಮಿ ಬೇಸಿಲ್ ವಾಸ್

0

ಮಡಂತ್ಯಾರು:  ಮಡಂತ್ಯಾರು  ಸೇಕ್ರೆಡ್ ಹಾರ್ಟ್ ಚರ್ಚ್  ಪೇಟೆಯಲ್ಲಿ ಮುಖ್ಯ ಗುರುಗಳಾದ ಸ್ವಾಮಿ ಬೇಸಿಲ್ ವಾಸ್ ರವರು ಸೆ.8ರಂದು ಹೊಸ ತೆನೆ ಗಳನ್ನು ಆಶೀರ್ವಾದಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ಜೂನಿಯರ್ ಕಾಲೇಜಿನ ಪ್ರಾಂಶುಪಾಲರಾದ ವ.ಜೆರೊಮ್ ಡಿ ಸೋಜರವರು ಬಲಿಪೂಜೆ ಅರ್ಪಿ‌ಸಿದರು. ವಿ.ವಿಲಿಯಂ ಡಿ ಸೋಜರವರು ಪ್ರವಚನ ನೀಡಿದರು.ಆಂಗ್ಲ ಮಾಧ್ಯಮದ ಮುಖ್ಯೋಪಾಧ್ಯಾಯರದ ವಿ.ದೀಪಕ್ ಡೆಸಾ ರವರು ವಿ.ಜೋಯ್ ರೊಡ್ರಿಗಸ್ ರೊಂದಿಗೆ ಸೇರಿ ದಾನಿಗಳನ್ನು ಗೌರವಿಸಿದರು.

ಉಪಾಧ್ಯಕ್ಷ ರಾದ ಲಿಯೋ ರೊಡ್ರಿಗಸ್, ಕಾರ್ಯದರ್ಶಿ ಜೆರಾಲ್ಡ್,ಸಂಯೋಜಕ ವಿವೇಕ್ ಪಾಯ್ಸ್ ರವರು ವ್ಯವಸ್ಥೆ ಯ ಮೇಲ್ವಿಚಾರಣೆ ನೋಡಿದರು.3000 ಭಕ್ತಾದಿಗಳು ಪಾಲ್ಗೊಂಡರು.
ಐಸಿವೈಎಂ ಕಾರ್ಯಕರ್ತರು ಕಬ್ಬು ಹಾಗೂ ಪಾಯಸ ಹಂಚಿದರು.

LEAVE A REPLY

Please enter your comment!
Please enter your name here