ಗುರುವಾಯನಕೆರೆಯಿಂದ ಲಾಯಿಲವರೆಗಿನ ರಾಷ್ಟ್ರೀಯ ಹೆದ್ದಾರಿ ದುರಸ್ಥಿಗೆ ಆಗ್ರಹ: ರಸ್ತೆ ತಡೆ ನಡೆಸಿ ಪ್ರತಿಭಟನೆ

0

ಗುರುವಾಯನಕೆರೆ: ಗುರುವಾಯನಕೆರೆಯಿಂದ ಲಾಯಿಲ(ಬೆಳ್ತಂಗಡಿ)ವರೆಗಿನ ರಾಷ್ಟ್ರೀಯ ಹೆದ್ದಾರಿಯ ಮಾರ್ಗದ ಗುಂಡಿಗಳನ್ನು  ಮುಚ್ಚಿಸಿ ಸರಿಪಡಿಸುವಂತೆ ಸೆ.10ರಂದು ಗುರುವಾಯನಕೆರೆ ಬಂಟರ ಭವನ ಮುಂಭಾಗದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆಯನ್ನು ಮಾಡಲಾಯಿತು.

ಮೂರು ದಿನಗೊಳಗಾಗಿ ರಾಷ್ಟ್ರೀಯ ಹೆದ್ದಾರಿಯ ಮಾರ್ಗದ ಗುಂಡಿಗಳನ್ನು ಸರಿಪಡಿಸದೇ ಇದ್ದಲ್ಲಿ ಇಂದು ಅನಿರ್ಧಿಷ್ಟಾವಧಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡುವುದಾಗಿ ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲ ಇಂಜಿನಿಯರ್ ಗೆ ಬೆಳ್ತಂಗಡಿ ದ್ವಾರಕ ಮೋಟಾರ್ ಡ್ರ್ಐವಿಂಗ್ ಸ್ಕೂಲ್ ಮಾಲಕ ಯಶವಂತ ಆರ್ ಬಾಳಿಗ ಪತ್ರ ಬರೆದಿದ್ದರು ಅದರಂತೆ ಸೆ.10ರಂದು  ರಸ್ತೆ ತಡೆ ನಡೆಸಿ ಪ್ರತಿಭಟನೆಯನ್ನು ಮಾಡಲಾಯಿತು.

ಪ್ರತಿಭಟನೆಯಲ್ಲಿ  ಕಮ್ಯುನಿಸ್ಟ್ ಮುಖಂಡ  ಶೇಖರ್ ಲಾಯಿಲ, ವಕೀಲ ಮನೋಹರ್,   ಬೆಳ್ತಂಗಡಿ ದ್ವಾರಕ ಮೋಟಾರ್ ಡ್ರೈವಿಂಗ್ ಸ್ಕೂಲ್ ಮಾಲಕ ಯಶವಂತ್ ಬಾಳಿಗ, ಇಂಟೆಕ್ ಅಧ್ಯಕ್ಷ  ನವೀನ್ ಗೌಡ, ಕಾಂಗ್ರೆಸ್ ಯುವ ಅಧ್ಯಕ್ಷ ಅನಿಲ್ ಪೈ, ಪ್ರಖ್ಯಾತ್ ಜೈನ್, ಮೊದಲಾದವರು ಭಾಗಿಯಾಗಿದ್ದರು.

ಗುರುನಾರಾಯಣ ಸಂಘದ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಸತ್ಯಜಿತ್ಅವರು ಹೆದ್ದಾರಿ ಬ್ಲಾಕ್ ನಲ್ಲಿ ಸಿಲುಕಿಕೊಂಡು ಬಳಿಕ ದ್ವಿಚಕ್ರ ವಾಹನದಲ್ಲಿ ಪ್ರಯಾಣ ಮುಂದುವರೆಸಿದರು. ಪ್ರತಿಭಟನೆಯಿಂದಾಗಿ ಸ್ವಲ್ಪ ಹೊತ್ತು ಸಂಚಾರಕ್ಕೆ ತಡೆಯಾಯಿತು.

 

 

 

 

 

LEAVE A REPLY

Please enter your comment!
Please enter your name here