ಹಳ್ಳಿಂಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಮಹಾಸಭೆ

0

ಕೊಕ್ಕಡ: ಹಳ್ಳಿಂಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸೆ.16ರಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಮುದಾಯ ಭವನ ಹಳ್ಳಿಂಗೇರಿಯಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಶ್ವೇತಾ ಹೆಚ್ ಕೆ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದಲ್ಲಿ ಒಟ್ಟು 167 ಸದಸ್ಯರಿದ್ದು ವರದಿ ಸಾಲಿನಲ್ಲಿ 2,11,833 ಲೀಟರ್ ಹಾಲು ಸಂಗ್ರಹಿಸಿದ್ದು ಸಂಘವು ಈ ವರ್ಷ ಇತಿಹಾಸದಲ್ಲಿ ಗರಿಷ್ಠ 2,95,450 ರೂಗಳ ನಿವ್ವಳ ಲಾಭ ಗಳಿಸಿದೆ. ಇದನ್ನು ಸಂಘದ ನಿಬಂಧನೆ ಪ್ರಕಾರ ಪ್ರತೀ ಲೀಟರ್ ಹಾಲಿಗೆ 66 ಪೈಸೆಯಂತೆ ಬೋನಸ್ ನೀಡಲಾಗುವುದು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ದ.ಕ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಚಂದ್ರಶೇಖರ್ ಭಟ್ ಮಾತನಾಡಿ ಒಕ್ಕೂಟದಿಂದ ಲಭ್ಯವಿರುವ ಅನುದಾನವನ್ನು ಸೂಕ್ತ ರೀತಿಯಲ್ಲಿ ಒಳಸಿಕೊಳ್ಳಬೇಕು. ಆಧುನಿಕ ವಿಧಾನಗಳ ಮೂಲಕ ಉತ್ತಮ ಗುಣಮಟ್ಟದ ಹಾಲು ಪೂರೈಸಿ ಆರ್ಥಿಕ ಪ್ರಗತಿ 1 ಎಂದರು. ಸಂಘದಿಂದಲೇ ಪಶು ಆಹಾರವನ್ನು ಪಡೆಯುವುದರಿಂದ ಸದಸ್ಯರಿಗೂ ಹೆಚ್ಚಿನ ಲಾಭವಾಗುತ್ತದೆ ಎಂದರು. ಒಕ್ಕೂಟದ ವಿಸ್ತರಣಾಧಿಕಾರಿ ರಾಜೇಶ್ ಕಾಮತ್ ಅವರು ಒಕ್ಕೂಟದಿಂದ ಲಭ್ಯವಾಗುವ ಸವಲತ್ತಿನ ಬಗ್ಗೆ ತಿಳಿಸಿದರು.

ಸಂಘದ ಉಪಾಧ್ಯಕ್ಷೆ ಹೇಮಾವತಿ ಹಾಗೂ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು. ಸಂಗದ ವರದಿ ಸಾಲಿನಲ್ಲಿ ಅತ್ಯಂತ ಹೆಚ್ಚು ಮತ್ತು ವರ್ಷಪೂರ್ತಿ ಹಾಲು ಪೂರೈಸಿದ ಸದಸ್ಯರುಗಳನ್ನು ಬಹುಮಾನ ನೀಡಿ ಗೌರವಿಸಲಾಯಿತು. ದಿವ್ಯಾಕೆ ಪ್ರಾರ್ಥಿಸಿದರು. ಸುಂದರಿ ಎ ಸ್ವಾಗತಿಸಿದರು. ಅಕ್ಷತಾ ವಮದಿಸಿದರು. ಕಾರ್ಯದರ್ಶಿ ಸಂಧ್ಯಾ ವರದಿ ವಾಚಿಸಿದರು. ವೇದಾವತಿ ಸಹಕರಿಸಿದರು.

LEAVE A REPLY

Please enter your comment!
Please enter your name here