ನಾಳ ನವರಾತ್ರಿ ವಿಶೇಷ ಪೂಜೆ ಹಾಗೂ ಭಜನೋತ್ಸವ ಕಾರ್ಯಕ್ರಮ ಪ್ರಾರಂಭ

0

ನಾಳ : ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ನವರಾತ್ರಿ ವಿಶೇಷ ಪೂಜೆ ಮತ್ತು ಭಜನೋತ್ಸವ ಕಾರ್ಯಕ್ರಮ ಸೆ.26 ರಂದು ಕಾರ್ಯಕ್ರಮ ಪ್ರಾರಂಭವಾಯಿತು.
ನವರಾತ್ರಿ ಪ್ರಾರಂಭದಲ್ಲಿ ರಾತ್ರಿ ರಕ್ತೇಶ್ವರಿಪದವು ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಸದಸ್ಯರಿಂದ ಭಜನೋತ್ಸವ ಕಾರ್ಯಕ್ರಮ ಜರುಗಿತು.

ರಾತ್ರಿ ಮಹಾ ಪೂಜೆ ಹಾಗೂ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರುಗಿತು. ಭಜನಾ ಸೇವಾ ಕರ್ತರಾದ ವಿಜಯ ಹೆಚ್.ಪ್ರಸಾದ್ ಮತ್ತು ಕೆ.ಎಸ್.ಹರಿ ಪ್ರಸಾದ್ ದಂಪತಿಗಳಿಂದ ಭಜನಾ ಸೇವೆ ನಡೆಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ, ಅಭಿವೃದ್ಧಿ ಸಮಿತಿ, ಭಜನಾ ಮಂಡಳಿ ಮತ್ತು ಶ್ರೀ ದುರ್ಗಾ ಮಾತೃ ಮಂಡಳಿ ಸಮಿತಿ ಅಧ್ಯಕ್ಷರು,ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here