ಬೆಳ್ತಂಗಡಿ : ಶಾಲೆಗೆಂದು ಹೊರಟು ಹೋದ ಇಬ್ಬರು ಮಕ್ಕಳು ನಾಪತ್ತೆ: ಸೃಷ್ಠಿಯಾದ ಆತಂಕ: ಪೊಲೀಸರಿಗೆ ದೂರು: ತೋಟದಲ್ಲಿ ಪತ್ತೆಯಾದ ಮಕ್ಕಳು

0

ಬೆಳ್ತಂಗಡಿ: ಲಾಯಿಲ ಗ್ರಾಮದ ಪಡ್ಲಾಡಿ ಸ.ಕಿ.ಪ್ರಾ ಶಾಲೆಯ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ ಎಂದು ಮಕ್ಕಳ ಹೆತ್ತವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಇದೀಗ ಮಕ್ಕಳು ತೋಟದಲ್ಲಿ ಆಟವಾಡುತ್ತಿದ್ದರು ಎಂದು ತಿಳಿದು ಬಂದಿದ್ದು ಪ್ರಕರಣ ಸುಖಾಂತ್ಯಗೊಂಡಿದೆ.

 

ಮಡಿಕೇರಿ ಮೂಲದ ದಂಪತಿಯ ಮಕ್ಕಳಾದ ಮಂಜುನಾಥ್ 4ನೇ ತರಗತಿ ಹಾಗೂ ನೇತ್ರಾವತಿ 1ನೇ ತರಗತಿ ಇವರು ಬೆಳಿಗ್ಗೆ ಮನೆಯಿಂದ ಸೈಕಲಿನಲ್ಲಿ ದಿನಂಪ್ರತಿ ಶಾಲೆಗೆ ಹೋಗುವಂತೆ ಇಂದು ಬೆಳಿಗ್ಗೆ ಶಾಲೆಗೆ ಹೊರಟಿದ್ದರು. ಆದರೆ ಶಾಲೆಗೆ ಮಕ್ಕಳು ಬರಲಿಲ್ಲ ಎಂದು ಮುಖ್ಯೋಪಾಧ್ಯಾಯರು ಹೆತ್ತವರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಹೆತ್ತವರು ಆತಂಕಗೊಂಡು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.  ಎಲ್ಲೆಡೆ ಹುಡುಕಾಡಿದಾಗ ತೋಟದಲ್ಲೇ ಆಟವಾಡುತ್ತಿರುವುದು ಪತ್ತೆಯಾಗುವದರೊಂದಿಗೆ ಪ್ರಕರಣ ಸುಖಾಂತ್ಯಗೊಂಡಿದೆ.

 

LEAVE A REPLY

Please enter your comment!
Please enter your name here