ಮೈರೋಳ್ತಡ್ಕ: ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್, ಮಾಹಿತಿ ಕಾರ್ಡ್ ಕಾರ್ಯಾಗಾರ, ಉದ್ಘಾಟನಾ‌ ಕಾರ್ಯಕ್ರಮ

0

ಮೈರೋಳ್ತಡ್ಕ: ಸೆ 28 ಬಂದಾರು ಗ್ರಾಮದ ಭಾರತೀಯ ಜನತಾ ಪಾರ್ಟಿ ಬೂತ್ ಸಮಿತಿ ಮೈರೋಳ್ತಡ್ಕ, ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.) ಗುರುವಾಯನಕೆರೆ  ಮತ್ತು  ಸೇವಾ ಸಿಂಧು ಡಿಜಿಟಲ್‌ ಸೇವಾ ಕಾಮನ್ ಸರ್ವೀಸ್ ಸೆಂಟರ್ ಮೈರೋಳ್ತಡ್ಕ ಇದರ ಆಶ್ರಯದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ (ಆಭಾ ಕಾರ್ಡ್), ಮಾಹಿತಿ ಕಾರ್ಡ್ ಕಾರ್ಯಾಗಾರ, ಉದ್ಘಾಟನಾ‌ ಕಾರ್ಯಕ್ರಮ,
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈರೋಳ್ತಡ್ಕ’ದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮೈರೋಳ್ತಡ್ಕ ಬೂತ್ ಸಮಿತಿ  ಅಧ್ಯಕ್ಷರು  ಪ್ರಶಾಂತ ಗೌಡ ನಿಂರ್ಬುಡ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಬಂದಾರು ಗ್ರಾ.ಪಂ ಅಧ್ಯಕ್ಷೆ ಪರಮೇಶ್ವರಿ ಕೆ.ಗೌಡ, ಕಣಿಯೂರು ವಲಯ ಮೇಲ್ವಿಚಾರಕಿ ಪ್ರೇಮ, ಮೈರೋಳ್ತಡ್ಕ ಸೇವಾಪ್ರತಿನಿಧಿ ಚಂದ್ರಕಲಾ,  ಣಿಯೂರು ಮಹಾಶಕ್ತಿ ಕೇಂದ್ರದ  ಅಧ್ಯಕ್ಷರು  ಜಯಾನಂದ ಕಲ್ಲಾಪು,  ಕಣಿಯೂರು ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ  ಬಾಲಕೃಷ್ಣ ಗೌಡ,  ಬಂದಾರು ಶಕ್ತಿ‌ ಕೇಂದ್ರ ಪ್ರಮುಖ್  ಅಶೋಕ ಗೌಡ, ಬೂತ್ ಸಮಿತಿ ಕಾರ್ಯದರ್ಶಿ ಜನಾರ್ದನ ಗೌಡ, ಬಂದಾರು ಗ್ರಾ.ಪಂ ಸದಸ್ಯರು ದಿನೇಶ್ ಗೌಡ ಖಂಡಿಗ,  ಸುಚಿತ್ರಾ, ತಾ.ಪಂ ಮಾಜಿ ಸದಸ್ಯರು ಕೃಷ್ಣಯ್ಯ ಆಚಾರ್ಯ, ಪದ್ಮುಂಜ ಹಾ.ಉ.ಸ.ಸಂಘ ನಿರ್ದೇಶಕರು ಡೊಂಬಯ್ಯ ಗೌಡ ಖಂಡಿಗ,  ಯುವಮೋರ್ಚಾ ಬೆಳ್ತಂಗಡಿ ಮಂಡಲ ಸದಸ್ಯರು ಗಿರೀಶ್ ಗೌಡ ಬಿ.ಕೆ ,
ಶ್ರೀಧರ ಗೌಡ ,ಚಂದಪ್ಪ ಗೌಡ,ರಾಮಣ್ಣ ಗೌಡ,ಉಪಸ್ಥಿತರಿದ್ದರು.

ಬಂದಾರು ಗ್ರಾ.ಪಂ ಸಿಬ್ಬಂದಿ ದಿನಕರ ಗೌಡ, ಮೈರೋಳ್ತಡ್ಕ ಹಾಗೂ ಮುರ ವಿ.ಎಲ್.ಇ ಗಳಾದ ಕು.ಮಧುಶ್ರೀ,ಕು.ಸುಶ್ಮೀತ ಇವರು ಸಹಕರಿಸಿದರು.
ಸುಮಾರು 100 ಕ್ಕಿಂತಲೂ ಹೆಚ್ಚು ಗ್ರಾಮಸ್ಥರು ಈ ನೋಂದಾವಣೆ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here