ಭಾರತೀಯ ಜೈನ್ ಮಿಲನ್ ಬೆಳ್ತಂಗಡಿಯ ನೂತನ ಅಧ್ಯಕ್ಷರಾಗಿ ಡಾ.ನವೀನ್ ಕುಮಾರ್ ಜೈನ್ ಆಯ್ಕೆ

0

ಬೆಳ್ತಂಗಡಿ:  ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ವಲಯ 8ರ ನೂತನ ಅಧ್ಯಕ್ಷರಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತ್ತಕೋತ್ತರ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ನವೀನ್ ಕುಮಾರ್ ಜೈನ್ ಆಯ್ಕೆಯಾದರು.

ಕಾರ್ಯದರ್ಶಿಯಾಗಿ ವೀರ್ ಸಂಪತ್ ಕುಮಾರ್ ಹಾಗೂ ಕೋಶಾಧಿಕಾರಿಯಾಗಿ ವೀರ್ ನಿಖಿತ್ ಜೈನ್ , ಜೊತೆ ಕಾರ್ಯದರ್ಶಿಯಾಗಿ ವೀರಾಂಗನ ಅಶ್ವಿನಿ ಜೈನ್ ಆಯ್ಕೆಯಾದರು. ಈ ಆಯ್ಕೆ ಪ್ರಕ್ರಿಯೆಯನ್ನು ಭಾರತೀಯ ಜೈನ್ ಮಿಲನ್ ವಲಯ 8ರ ನಿರ್ದೇಶಕರಾಗಿರುವ ವೀರ  ಬಿ ಸೋಮಶೇಖರ್ ಶೆಟ್ಟಿ ಇವರು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಮಿಲನ ಉಪಾಧ್ಯಕ್ಷರು ಗಳಾಗಿ ವೀರ ಅಜಯ್ ಕುಮಾರ್, ವೀರ್ ಸನ್ಮತಿ ಕುಮಾರ್, ವೀರ್ ಉದಯ್ ಕುಮಾರ್ ಧರ್ಮಸ್ಥಳ ವೀರಾಂಗನ ಸುಧಾಮಣಿ, ವೀರ್ ಸತ್ಯಪ್ರಸಾದ್ ವಿ ಜೈನ್ ಆಯ್ಕೆಯಾದರು. ಈ ಆಯ್ಕೆ ಪ್ರಕ್ರಿಯೆಯು ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ಇದರ ಅಧ್ಯಕ್ಷರು ವೀರ ಎನ್ ಶಾಂತಿರಾಜ್ ಜೈನ್ ಪಡಂಗಡಿ ಇವರ ಸಮ್ಮುಖದಲ್ಲಿ ನಡೆಯಿತು.

ಮಿಲನ್ ನ ಹಿರಿಯ ಸದಸ್ಯರುಗಳಾದ ವೀರ್ ಭುಜಬಲಿ ಧರ್ಮಸ್ಥಳ ವೀರ್ ಪ್ರೊ ಎನ್ ದಿನೇಶ್ ಚೌಟ, ವೀರ್ ಜೀವಂದರ್ ಜೈನ್, ವೀರ್ ಮುನಿರಾಜ ಅಜ್ರಿ, ವೀರ್ ಯುವರಾಜ್ ಪೂವಣಿ,ವೀರ್ ಕಿಶೋರ್ ಹೆಗ್ಡೆ ಇವರೆಲ್ಲರೂ ಮಿಲನ ಸಂಘಟನೆಗಾಗಿ ಹೊಸ ಪದಾಧಿಕಾರಿಗಳಿಗೆ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.

LEAVE A REPLY

Please enter your comment!
Please enter your name here