ಸಿಯೋನ್ ಆಶ್ರಮ: ಗಾಂಧಿ ಜಯಂತಿ ಹಾಗೂ ಹಿರಿಯ ನಾಗರಿಕರ ದಿನಾಚರಣೆ

0

ಗಂಡಿಬಾಗಿಲು:  ಸಿಯೋನ್ ಆಶ್ರಮ ಟ್ರಸ್ಟ್(ರಿ.) ಗಂಡಿಬಾಗಿಲು ಇಲ್ಲಿ ಅ.2  ರಂದು ಗಾಂಧಿ ಜಯಂತಿ ಹಾಗೂ ಹಿರಿಯ ನಾಗರಿಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟೀಯವರಾದ  ಡಾ.ಯು.ಸಿ.ಪೌಲೋಸ್‌ರವರು ಗಾಂಧೀಜಿಯವರ ತ್ಯಾಗ-ಬಲಿದಾನ, ಪ್ರೀತಿ-ಸತ್ಯಅಹಿಂಸಾಮಾರ್ಗದ ಮೂಲಕ ಸ್ವಾತಂತ್ರ್ಯ ದೊರಕಿಸಿಟ್ಟ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.

ಹಿರಿಯ ನಾಗರಿಕರ ದಿನಾಚರಣೆಯನ್ನು ಆಚರಿಸುವ ಪ್ರಾಮುಖ್ಯತೆ ಮತ್ತು ಸಿಯೋನ್ ಆಶ್ರಮದಲ್ಲಿ ಯಾವುದೇ ಜಾತಿ-ಮತ, ಬೇಧ-ಭಾವವಿಲ್ಲದೇ ಬೇರೆ ಬೇರೆ ಧರ್ಮದ ಮೂವರು ಹಿರಿಯ ನಾಗರೀಕರನ್ನು ಗುರುತಿಸಿ, ಪ್ರತಿ ವರ್ಷ ಸನ್ಮಾನಿಸಲಾಗುವುದೆಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ವೇದಿಕೆಯನ್ನಲಂಕರಿಸಿದ್ದ ಸೈಂಟ್ ತೋಮಸ್ ದೇವಾಲಯ ಗಂಡಿಬಾಗಿಲಿನ ಧರ್ಮಗುರುಗಳಾದ ರೆ.ಫಾ.ಮಾಥ್ಯು ವೆಟ್ಟಂತಡತ್ತಿಲ್‌ರವರು ಗಾಂಧೀಜಿಯವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕೋಣ. ಹಿರಿಯರನ್ನು ಗೌರವಿಸಿ, ನೆಮ್ಮದಿಯ ಬದುಕು ಕಲ್ಪಿಸಿಕೊಡುವುದರಿಂದ ಮಾನವ ಜನ್ಮ ಸಾರ್ಥಕವಾಗಿಸಬಹುದು. ಸಿಯೋನ್ ಆಶ್ರಮದಲ್ಲಿ ಹಿರಿಯನಾಗರಿಕರ ದಿನಾಚರಣೆಯಂದು ಹಿರಿಯರನ್ನು ಸನ್ಮಾನಿಸುವುದು ಶ್ಲಾಘನೀಯ ಎಂದರು.

ನೆರಿಯ ಗ್ರಾಮದ ಹಿರಿಯ ನಾಗರಿಕರು ಮತ್ತು ಪ್ರಸಿದ್ಧ ಉದ್ಯಮಿಯಾಗಿರುವ ಆಂಟನಿ, ತೋಟತ್ತಾಡಿ ಗ್ರಾಮದ ಹಿರಿಯ ನಾಗರಿಕರಾದ  ತಿಮ್ಮಪ್ಪ ಪೂಜಾರಿ ಹಾಗೂ ನೆರಿಯ ಗ್ರಾಮದ ಹಿರಿಯ ನಾಗರಿಕರಾದ ಹಾಜಿರಾ ಇವರುಗಳನ್ನು ಪ್ರಮಾಣ ಪತ್ರ, ಫಲಪುಷ್ಪಗಳೊಂದಿಗೆ, ಪೇಟಾ ಶಾಲು ಹೊದಿಸಿ ಸನ್ಮಾನಿಸಲಾಯಿತು. ಗಂಡಿಬಾಗಿಲು ಸೈಂಟ್ ತೋಮಸ್ ದೇವಾಲಯದ ಧರ್ಮಗುರುಗಳಾದ ರೆ.ಫಾ.ಮಾಥ್ಯು ವೆಟ್ಟಂತಡತ್ತಿಲ್‌ರವರಿಗೆ ಪಾಲಕ-ಸಂತರ ಹಬ್ಬದ ಪ್ರಯುಕ್ತ ಸೈಂಟ್  ಮೇರಿಸ್ ವಾರ್ಡ್‌ನ ವತಿಯಿಂದ ಸನ್ಮಾನಿಸಲಾಯಿತು.

ಟ್ರಸ್ಟೀ ಸದಸ್ಯರಾದ  ಮೇರಿ ಯು.ಪಿ.ಯವರು ಹಾಗೂ ದಾನಿಗಳಾದ ಲಿನಿ ಸಂತೋಷ್ ನೀಲಿಯಾರವರು ವೇದಿಕೆಯನ್ನಲಂಕರಿಸಿದ್ದರು. ಹಿರಿಯ ನಾಗರಿಕರ ದಿನಾಚರಣೆಯ ಪ್ರಯುಕ್ತ ಸಿಯೋನ್ ಆಶ್ರಮದ ಹಿರಿಯ ನಾಗರಿಕರಿಗೆ ಒಳಾಂಗಣ ಆಟಗಳನ್ನು ಏರ್ಪಡಿಸಲಾಗಿದ್ದು, ಇದರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಈ ಕಾರ್ಯಕ್ರಮಕ್ಕೆ ಸೈಂಟ್ ತೋಮಸ್ ದೇವಾಲಯದ ಧರ್ಮಭಗಿನಿಯರು, ಕಾರ್ಯಕರ್ತರು ಮತ್ತು ಸದಸ್ಯರುಗಳು ಆಗಮಿಸಿದ್ದರು. ಸಿಯೋನ್ ಆಶ್ರಮದ ಆಡಳಿತ ಮಂಡಳಿಯವರು, ಸಿಬ್ಬಂದಿವರ್ಗದವರು ಹಾಗೂ ಆಶ್ರಮ ನಿವಾಸಿಗಳೆಲ್ಲರೂ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಂಸ್ಥೆಯ ಆಡಳಿತಾಧಿಕಾರಿ  ಶೋಭಾ ಯು.ಪಿ.ಯವರು ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಯವರಾದ  ದಿನವತಿಯವರು  ಸ್ವಾಗತಿಸಿ, ಮಿಷಾ ಕುರಿಯನ್‌ರವರು ವಂದಿಸಿದರು.

ಮಧ್ಯಹ್ನದ ಭೋಜನದ ವ್ಯವಸ್ಥೆಯನ್ನು ದಿ.ಸಂತೋಷ್ ನೀಲಿಯಾರ ಮತ್ತು ಲಿನಿ ಸಂತೋಷ್ ನೀಲಿಯಾರರವರ 27ನೇ ಮದುವೆ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀಯುತ ಸುನಿಲ್ ನೀಲಿಯಾರ ಮತ್ತು ಶಾಜಿ ಪರೋವಕಾರನ್‌ರವರು ನೀಡಿದರು.

LEAVE A REPLY

Please enter your comment!
Please enter your name here