ಬೆಳ್ತಂಗಡಿ: ತಾಲೂಕು ಮಟ್ಟದಲ್ಲಿ ದೊಸೆ ಹಬ್ಬ ಪೂರ್ವಭಾವಿ ಸಭೆ: ದೀಪಾವಳಿಯ ದೊಸೆ ಹಬ್ಬ ವಿಜೃಂಭಣೆಯಿಂದ ನಡೆಯಲಿದೆ: ಶಾಸಕ ಪೂಂಜ , ದೀಪಾವಳಿ ದೊಸೆ ಹಬ್ಬಕ್ಕೆ ಎಲ್ಲರ ಸಹಕಾರ ಮುಖ್ಯ: ಜಯಂತ್ ಕೋಟ್ಯಾನ್

0

ಬೆಳ್ತಂಗಡಿ: ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ, ಶಾಸಕರಾದ ಹರೀಶ್ ಪೂಂಜ ರವರ ಕಲ್ಪನೆಯಂತೆ ಬಿಜೆಪಿ ಯುವ ಮೋರ್ಚಾದ ವತಿಯಿಂದ ದೀಪಾವಳಿ ಪ್ರಯುಕ್ತ ನಡೆಯುವ ದೋಸೆ ಹಬ್ಬದ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಅ.14 ರಂದು ನಡೆಯಿತು.

ಸಭೆಯಲ್ಲಿ ದೀಪಾವಳಿ ಹಬ್ಬದಂದು ಹಮ್ಮಿಕೊಂಡಿರುವ ದೋಸೆ ಹಬ್ಬ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.

ಶಾಸಕರಾದ ಹರೀಶ್ ಪೂಂಜರವರು ಮಾತನಾಡಿ ಪ್ರತಿ ವರ್ಷದಂತೆ ನಡೆಯುವ ದೊಸೆ ಹಬ್ಬವನ್ನು ಈ ಬಾರಿಯೂ ವಿಜೃಂಭಣೆಯಿಂದ ನಡೆಸಲಾಗುವುದು. ಎಲ್ಲರ ಸಹಕಾರ ಮುಖ್ಯ ಎಂದು ಎಂದರು.

ಸಭೆಯಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ರಾವ್, ಗಣೇಶ್ ನಾವರ ,ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಯಶವಂತ್ ಬೆಳಾಲ್, ಪ್ರಧಾನ ಕಾರ್ಯದರ್ಶಿಗಳಾದ ವಿನೀತ್ ಸಾವ್ಯ, ಉಮೇಶ್ ಗುರುವಾಯನಕೆರೆ, ಯುವಮೋರ್ಚಾ ಪ್ರಭಾರಿ ಸೀತಾರಾಮ್ ಬೆಳಾಲ್, ಮಹಾಶಕ್ತಿ ಕೇಂದ್ರದ ಪ್ರಮುಖರು, ಮಂಡಲದ ಪ್ರಮುಖರು, ಶಕ್ತಿ ಕೇಂದ್ರದ ಪ್ರಮುಖರು, ಯುವಮೋರ್ಚಾ ದ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here