ತೆಂಕಕಾರಂದೂರು ಗ್ರಾಮದ ಕಾಪಿನಡ್ಕ ಮನೆ ನಿವಾಸಿ ಹರಿಹರ ಎಂ.ಮೆಹೆಂದಳೆ ನಿಧನ

0

ಬೆಳ್ತಂಗಡಿ‌: ಅಮೆರಿಕಾದಲ್ಲಿ ಅಂತರಾಷ್ಟ್ರೀಯ ಮಟ್ಟದ  ವಿಜ್ಞಾನಿಯಾಗಿ ಸಂಶೋಧಕರಾಗಿದ್ದ ಬೆಳ್ತಂಗಡಿ ಮೂಲದ ಹರಿಹರ ಎಂ.ಮೆಹೆಂದಳೆ ( 83) ಅ. 14 ರಂದು ಅಮೆರಿಕಾದ ಟೆಕ್ಸಾಸ್‌ನಲ್ಲಿರುವ ಸ್ವಗೃಹದಲ್ಲಿ ನಿಧನರಾದರು.

ತೆಂಕಕಾರಂದೂರು ಗ್ರಾಮದ ಕಾಪಿನಡ್ಕ ಮನೆ ನಿವಾಸಿಯಾಗಿದ್ದ ದಿl ಮಹದೇವ ಮೆಹೆಂದಳೆ ಅವರ ಪುತ್ರರಾಗಿರುವ ಇವರು ಉಜಿರೆ ಸಿದ್ಧವನದಲ್ಲಿ ಇದ್ದು ಎಸ್.ಡಿ.ಎಂ.ನಲ್ಲಿ ಶಿಕ್ಷಣ ಮುಗಿಸಿ, ಧಾರಾವಾಡದಲ್ಲಿ ಕೃಷಿ ವಿಜ್ಞಾನ ಪದವಿಯನ್ನು ಪಡೆದು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ 1962 ರಲ್ಲಿ ಅಮೆರಿಕಾದ ಕೆರೊಲಿನಾ ವಿಶ್ವವಿದ್ಯಾಲಯ ಸೇರಿಕೊಂಡರು.

ಲಾಸ್ಎಂಜಲಿಸ್‌ನ ಮೊನ್ರೆಒ ದಲ್ಲಿ ಕೀಟಶಾಸ್ತ್ರ ಅಧ್ಯಯನ ನಡೆಸಿ ಬಳಿಕ ಲೂಸಿಯಾನ ವಿ.ವಿ.ಯಲ್ಲಿ ಟೋಕ್ಸಿಕಾಲಜಿ ( ರಾಸಾಯನಿಕ ಪದಾರ್ಥಗಳಲ್ಲಿ ಇರುವ ವಿಷ ನಮ್ಮ ಶರೀರಕ್ಕೆ ಯಾವ ರೀತಿಯಲ್ಲಿ ಮಾರಕವಾಗಬಲ್ಲುದು ಎಂಬ ಬಗ್ಗೆ ) ಯಲ್ಲಿ ಸಂಶೋಧಕರಾಗಿದ್ದರಲ್ಲದೆ ಪ್ರೊಫೆಸರ್ ಕೂಡ ಆಗಿದ್ದರು.

ಸುಮಾರು 100 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪಿ.ಎಚ್‌‌ಡಿಗೆ ಮಾರ್ಗದರ್ಶನ ನೀಡಿದ್ದರು. ಭಾರತಾದ್ಯಂತ ಅನೇಕ ರಾಷ್ಟ್ರೀಯ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿಯೂ ಕೆಲಸ ಮಾಡಿದ್ದರು. ಕಳೆದ ಕೆಲ ತಿಂಗಳಿಂದ ಅವರು ಅನಾರೋಗ್ಯದಿಂದ ಇದ್ದರು. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here