ಮಾಲಾಡಿ ಗ್ರಾ.ಪಂ ನಲ್ಲಿ ವಿಶ್ವ ಕೈ ತೊಳೆಯುವ ಕಾರ್ಯಕ್ರಮ

0

ಮಾಲಾಡಿ: ಮಾಲಾಡಿ ಗ್ರಾಮಪಂಚಾಯತಿ ಯಲ್ಲಿ ಬೇಬಿಸುಸನ್ನ ಅಧ್ಯಕ್ಷತೆಯಲ್ಲಿ ಅ.15  ರಂದು ವಿಶ್ವ ಕೈತೊಳೆಯುವ ಕಾರ್ಯಕ್ರಮ, ಮಹಿಳಾ ಗ್ರಾಮಸಭೆ, ಅರೋಗ್ಯ ವಂತ ಶಿಶು ಪ್ರದರ್ಶನ, ಹೆಣ್ಣು ಮಗುವಿನ ಪ್ರದರ್ಶನ ಹಾಗೂ ಆಭಾ ಕಾರ್ಡ್ ನೋಂದಣಿ ಕಾರ್ಯಕ್ರಮ ನಡೆಯಿತು.

ಸಂಪನ್ಮೂಲ ವ್ಯಕ್ತಿ ಗಳಾಗಿ  ವಿಶಾಲಾಕ್ಷಿ ಹೆಣ್ಣು ಮಕ್ಕಳ ಬಗ್ಗೆ, ಹಕ್ಕು ಗಳ ಬಗ್ಗೆ ಮಾಹಿತಿ ನೀಡಿದರು.

ಚೇತನ ಸಿ ರ್ ಪಿ ಪುಂಜಾಲಕಟ್ಟೆ ಇವರು ಸಮಾಜದಲ್ಲಿ ಹೆಣ್ಣು ಮಕ್ಕಳ ಸಮಾನತೆ ಯ ಬಗ್ಗೆ, ಶಿಕ್ಷಣದ ಅಗತ್ಯತೆ ಬಗ್ಗೆ ಮಾಹಿತಿ ನೀಡಿದರು.

ಯಶೋಧ ಅಂಗನವಾಡಿ ಮೇಲ್ವಿಚಾರಕಿ ಅಂಗನವಾಡಿ ಇಲಾಖೆ ಯ ” ಭೇಟಿ ಬಚಾವೋ ಭೇಟಿ ಪಡವೋ” ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.    ಪ್ರಿಯ ಪ್ರಾಥಮಿಕ ಅರೋಗ್ಯ ಸುರಕ್ಷತಾಧಿಕಾರಿ ಮಾಲಾಡಿ ಇವರು ರಕ್ತಹಿನತೆ, ಕುಟುಂಬ ಕಲ್ಯಾಣ ಕಾರ್ಯಕ್ರಮ ಗಳಲ್ಲಿ ಶಾಶ್ವತ ಹಾಗೂ ತಾತ್ಕಾಲಿಕ ವಿಧಾನ ಬಗ್ಗೆ, ಮತ್ತು ಹೊಸದಾಗಿ ಜೆ ಇ ಚುಚ್ಚುಮದ್ದು ಬಗ್ಗೆಯೂ ಮಾಹಿತಿ ನೀಡಿದರು. ಅದರೊಂದಿಗೆ ಅಭಾ ಕಾರ್ಡ್ ನೋಂದಣಿ ಯು 92 ಮಂದಿಗೆ ಮಾಡಲಾಗಿರುತದೆ .

ಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರು ಪಂಚಾಯತ್ ಸಿಬ್ಬಂದಿ, ಉಪಾಧ್ಯಕ್ಷರು, ಪಂಚಾಯತ್ ಸದಸ್ಯರು, ಪಿಡಿಓ ಪುರುಷೋತ್ತಮ  ಉಪಸ್ಥಿತಿ ಯಲ್ಲಿ ನೆರವೇರಿತು.

LEAVE A REPLY

Please enter your comment!
Please enter your name here