ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರಮಹೋತ್ಸವ ಪೂರ್ವಭಾವಿ ಸಭೆ

0

ಬೆಳಾಲು : ಅನಂತೋಡಿ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಅಂಗವಾಗಿ ಊರವರ ಸಮಾಲೋಚನಾ ಸಭೆ ನ.6ರಂದು ಅನಂತೋಡಿ ಅನಂತ ಸದನದಲ್ಲಿ ನಡೆಯಿತು.ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ನೋಟರಿ ವಕೀಲ ಶ್ರೀನಿವಾಸ ಗೌಡ ಅಧ್ಯಕ್ಷತೆ ವಹಿಸಿದ್ದರು. ವಾರ್ಷಿಕ ಜಾತ್ರಾಮಹೋತ್ಸವ ಡಿ.25 ಮತ್ತು 26 ರಂದು ಜರಗಲಿದ್ದು ಜಾತ್ರೆಯ ಯಶಸ್ವಿಗೆ ಉಪಸ್ಥಿತರಿದ್ದ ಭಕ್ತರು ಸಲಹೆ ಸೂಚನೆ ನೀಡಿದರು ಹಾಗೂ ಯಶಸ್ವಿಗೆ ಜಾತ್ರೋತ್ಸವ ಸಮಿತಿ ಹಾಗು ಉಪ ಸಮಿತಿಗಳನ್ನು ರಚಿಸಲಾಯಿತು.

ಈ ವರ್ಷದ ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದೇಜಪ್ಪ ಗೌಡ ಏಳ್ಳುಗದ್ದೆ ಆಯ್ಕೆಯಾದರು. ಸಭೆಯಲ್ಲಿ ದೇವಸ್ಥಾನದ ಅಸ್ರನ್ನ ಗಿರೀಶ್ ಬಾರಿತ್ತಾಯ ಪಾರಳ, ಆಡಳಿತ ಮೊಕ್ತೇಸರ ಜೀವಂದರ ಕುಮಾರ್ ಬೆಳಾಲು ಗುತ್ತು, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್. ಜತ್ತನ್ನ ಗೌಡ, ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಕೇರ್ಮುಣ್ಣಾಯ, ಜಾತ್ರೋತ್ಸವ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಪಿ. ತಿಮ್ಮಪ್ಪ ಗೌಡ, ಮಹಿಳಾ ಸಮಿತಿಯ ಅಧ್ಯಕ್ಷೆ ಹೇಮಲತಾ ಶ್ರೀನಿವಾಸ ಗೌಡ, ಶ್ರೀ ಅನಂತಶ್ವರ ಭಜನಾ ಮಂಡಳಿ ಅಧ್ಯಕ್ಷ ಗುರುರಾಜ ಓಡಿಪ್ರೋಟ್ಟು, ಉಪಸ್ಥಿತರಿದ್ದರು. ಮಾಯ ಮಹಾದೇವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಶಿವ ಕುಮಾರ್ ಬಾರಿತ್ತಾಯ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹಾಗು ಸಮಿತಿ ಬೈಲುವಾರು ಸಮಿತಿಯ ಕಾರ್ಯದರ್ಶಿ ಸತೀಶ್ ಎಳ್ಳುಗದ್ದೆ, ಗ್ರಾಮ ಪಂಚಾಯತ್ ಸದಸ್ಯೆ ಹಾಗು ಮಹಿಳಾ ಸಮಿತಿಯ ಗೌರವಧ್ಯಕ್ಷೆ ,ಬೈಲು ವಾರು ಸಮಿತಿಯ ಸಂಚಾಲಕರು, ಸಹಸಂಚಾಲಕರು ಹಾಗೂ ಸರ್ವಸದಸ್ಯರು, ಮಹಿಳಾ ಸಮಿತಿಯ ಸರ್ವಸದಸ್ಯರು, ಆನಂತೇಶ್ವರ ಭಜನಾ ಮಂಡಳಿಯ ಸರ್ವಸದಸ್ಯರು ಊರವರು ಭಾಗವಹಿಸಿ ಸಲಹೆ ಸೂಚನೆ ನೀಡಿದರು.

LEAVE A REPLY

Please enter your comment!
Please enter your name here