ಪಾಲ್ಜಾಲ್ ಗುತ್ತು ಮನೆತನದ ಸದಸ್ಯರಿಂದ ಸೇವಾಶ್ರಮಕ್ಕೆ ಭೇಟಿ

0


‌ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಗುಂಡೂರಿಯ ಸೇವಾಶ್ರಮ ದ ಪರಿಸರದಲ್ಲಿ ಇರುವ ಬಿಲ್ಲವ ಸಮಾಜದ ಪಾಲ್ಜಾಲ್ ಗುತ್ತು ಮನೆತನದ ಸದಸ್ಯರಿಂದ ಸೇವಾಶ್ರಮ ಕ್ಕೆ ಭೇಟಿ ನೀಡಿ ಸೇವಾಶ್ರಮ ದ ನಿರ್ವಹಣಾ ನಿರ್ದೇಶಕರಾದ ಹೊನ್ನಯ್ಯ ಕಾಟಿಪಳ್ಳ ರವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದದ್ದಕ್ಕೆ ಅಭಿನಂದನೆ ನಲ್ಲಿಸಿದರು.

ಗುತ್ತು ಮನೆತನದ ಕುಂಡದ ಬೆಟ್ಟು ವಿನ ಶಿವಕೃಪ ಮನೆಯ ರಾಧಾಕೃಷ್ಣ, ಶಿಲ್ಪಾ, ಪ್ರತೀಕ್ಷಾ‌ ‌ಸೇವಾಶ್ರಮದ ಆಶ್ರಮವಾಸಿಗಳಿಗೆ ಹಣ್ಣು ಹಂಪಲು ನೀಡಿ ,50 ಕೆ.ಜಿ ಅಕ್ಕಿ ನೀಡಿ ಈ ಮೂಲಕ ಸಮಾಜ ಸೇವೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ ಕ್ಕೆ ಅಭಿನಂದನೆ ಸಲ್ಲಿಸಿ ಮುಂದಕ್ಕೂ ತಮ್ಮ ಸಮಾಜ ಮುಖಿ ಕೆಲಸಕ್ಕೆ ನಮ್ಮ ಕುಟುಂಬ ಸದಾ ಬೆಂಬಲ ವಿದೆ ಎಂದು ಅಭಿಮಾನದಿಂದ ಭರವಸೆ ನೀಡಿದರು.
ಈ ಪಾಲ್ಜಾಲ್ ಗುತ್ತು ಮನೆತನದ ಹಿರಿಯರಿಂದ ತನ್ನ ಕುಟುಂಬದ ಶ್ರೇಯವನ್ನು ಬಯಸಿದ ಜೊತೆಗೆ ಸಮಾಜದ ಇತರೇ ಬಡ ನೊಂದ ಮಂದಿಗಳನ್ನು ಮುಖ್ಯ ವಾಹಿನಿಗೆ ತರಿಸಿ ಅವರಿಗೆ ಬದುಕು ಕಟ್ಟಿಸಿ ಹತ್ತು ಹಲವು ಸಮಾಜ ಸೇವೆ ಮಾಡಿಕ್ಕೂಂಡು ಬಂದವರು ಅದನ್ನೇ ಹೊಸ ಪೀಳಿಗೆ ನಡೆಸಿಕ್ಕೂಂಡು ಬರುವುದು ಶ್ಲಾಘನೀಯ.

LEAVE A REPLY

Please enter your comment!
Please enter your name here