ಪುತ್ತೂರು: ಬೆಳ್ತಂಗಡಿಯಲ್ಲಿ ವಾಸ್ತವ್ಯ ಹೊಂದಿರುವ ಈಶ್ವರಮಂಗಲ ಮಡ್ಡಿಯೊಳಮಜಲು ತರವಾಡು ಮನೆಯ ದಿ.ಕೊರಗಪ್ಪ ಅವರ ಪತ್ನಿ ಸೀತಾ(೪೮ವ)ರವರು ಜೂ.೯ರಂದು ಸಂಜೆ ಹೃದಯಾಘಾತದಿಂದ ಉಜಿರೆ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಈಶ್ವರಮಂಗಲ ಮಡ್ಡಿಯೊಳಮಜಲು ತರವಾಡು ಮನೆಯಲ್ಲಿ ನಡೆಸಲಾಯಿತು.
ಸೀತಾ ಅವರು ಬೆಳ್ತಂಗಡಿ ಎಸ್.ಬಿ.ಐ ಬ್ಯಾಂಕ್ ಉದ್ಯೋಗಿಯಾಗಿದ್ದರು. ಜೂ.೯ರಂದು ಸಂಜೆ ಅವರು ಎದೆನೋವಿನಿಂದ ಬಳಲುತ್ತಿದ್ದು ತಕ್ಷಣ ಅವರನ್ನು ಉಜಿರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೃತರು ಬೆಳ್ತಂಗಡಿ ಎಬಿವಿಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತರಾದ ಪುತ್ರ ಸ್ವಸ್ತಿಕ್, ಪುತ್ರಿಯರಾದ ರಶ್ಮಿ ಮತ್ತು ಜ್ಯೋತಿರವರನ್ನು ಅಗಲಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಬೆಳ್ತಂಗಡಿ ನಗರಸಭಾ ಸದಸ್ಯ ಶರತ್ ಕುಮಾರ್, ಸಂಘದ ಪ್ರಮುಖರಾದ ರವಿ ಇಳಂತಿಲ, ರತ್ನಾಕರ್, ಜಗದೀಶ್, ಪ್ರಕಾಶ್, ನಿವೃತ್ತ ಪಿಎಸ್ಐ ಜನಾರ್ದನ್ ಸೇರಿದಂತೆ ಹಲವಾರು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದರು.
ಮೃತ ಸೀತಾ ಅವರ ಅಂತ್ಯಸಂಸ್ಕಾರ ಈಶ್ವರಮಂಗಲ ತರವಾಡು ಮನೆಯಲ್ಲಿ ನಡೆಸಿದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ತರವಾಡು ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಪಂಚೋಡಿಯಲ್ಲಿ ಬೈಕ್ಗಳೆರಡು ಅಪಘಾತ ಸಂಭವಿಸಿತ್ತು. ಅಪಘಾತದಿಂದ ಗಾಯಗೊಂಡವರು ಆನಡ್ಕದ ಪರಿವಾರ ಸಂಘಟನೆಯವರೆಂದು ತಿಳಿದು ಗಾಯಾಳು ದಾಖಲಾಗಿರುವ ಪುತ್ತೂರು ಮಹಾವೀರ ಆಸ್ಪತ್ರೆಗೆ ಹರೀಶ್ ಪೂಂಜಾ ಭೇಟಿ ನೀಡಿ ಆರೋಗ್ಯಕ್ಷೇಮ ವಿಚಾರಿಸಿ ತೆರಳಿದರು.