ವಿದ್ಯುತ್ ಬಳಕೆದಾರರಿಗೆ ಅಗತ್ಯ ಮಾಹಿತಿ: ಮಾಸಿಕ 75 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ಪಡೆಯಲು ಸಲ್ಲಿಸಬೇಕಾದ ದಾಖಲೆಗಳು ಯಾವುವು?

0

ಬೆಳ್ತಂಗಡಿ: ಮೆಸ್ಕಾಂ ಬೆಳ್ತಂಗಡಿ ಉಪವಿಭಾಗದ ಬೆಳ್ತಂಗಡಿ, ಕಲ್ಲೇರಿ,ಮಡಂತ್ಯಾರ್, ವೇಣೂರು ಹಾಗೂ ಅಳದಂಗಡಿ ಶಾಖೆಗಳಿಗೆ ಸಂಬಂಧಿಸಿದ ಬಿ.ಪಿ.ಎಲ್.ಕಾರ್ಡ್ ಹೊಂದಿರುವ ಎಲ್ಲ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ( ಗೃಹ ಬಳಕೆ/ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ) ವಿದ್ಯುತ್ ಬಳಕೆದಾರರಿಗೆ ರಾಜ್ಯ ಸರಕಾರದ ” ಅಮೃತ ಜ್ಯೋತಿ ” ಯೋಜನೆಯಡಿ ಮಾಸಿಕ 75 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ಪಡೆಯಲು, ಇಷ್ಟರವರೆಗೆ ” ಸೇವಾ ಸಿಂಧು”ನಲ್ಲಿ ಹೆಸರು ನೋಂದಾ ಯಿಸದ ಬಳಕೆದಾರರು ಕೂಡಲೆ ಮೆಸ್ಕಾಂ ಬೆಳ್ತಂಗಡಿ ಉಪವಿಭಾಗ ಕಚೇರಿಯಲ್ಲಿ ನ. 15 ರೊಳಗಾಗಿ  ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.

ಬೇಕಾದ ದಾಖಲೆಗಳು”

1.ಆಧಾರ್ ಕಾರ್ಡ್ ಪ್ರತಿ
2.ಆರ್.ಡಿ.( R.D.) ಸಂಖ್ಯೆ ಹೊಂದಿರುವ ಜಾತಿ ಪ್ರಮಾಣ ಪತ್ರ
3.ಬ್ಯಾಂಕ್ ಖಾತೆಯ ವಿವರದ ಪ್ರತಿ
4.ನಿಗದಿತ ನಮೂನೆ ಅರ್ಜಿ ಭರ್ತಿ ಮಾಡಿ ಸಹಿ ಮಾಡುವುದು.
5. ಪಾಸ್ ಪೋರ್ಟ್ ಅಳತೆಯ ಫೋಟೋ 1
6.ಬಿ.ಪಿ.ಎಲ್.ರೇಶನ್ ಕಾರ್ಡ್ ಪ್ರತಿ
7.ಮೊಬೈಲ್ ನಂಬರ್

LEAVE A REPLY

Please enter your comment!
Please enter your name here