ನೆರಿಯ ಗ್ರಾ.ಪಂ ಗ್ರಾಮಸಭೆ: ಅಣಿಯೂರು ಪರ್ಪಳ ಮೂಲಕ ಬಾಂಜಾರು ಮಲೆಗೆ ಸಂಪರ್ಕ ಕಲ್ಪಿಸಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಒತ್ತಾಯ

0

ನೆರಿಯ: ನೆರಿಯ ಗ್ರಾ.ಪಂ  ಗ್ರಾಮ ಸಭೆಯು ಬಾಂಜಾರು ಮಲೆ ಸಮುದಾಯ ಭವನದಲ್ಲಿ ನ.9ರಂದು ಜರುಗಿತು.

ಗ್ರಾಮ ಸಭೆಯಲ್ಲಿ  ಅಣಿಯೂರು ಪರ್ಪಳ ಮಾರ್ಗದ ಮೂಲಕ ಬಾಂಜಾರು ಮಲೆಗೆ ಸಂಪರ್ಕಿಸುವ ರಸ್ತೆ ಮಾಡುವಂತೆ ಗ್ರಾಮ ಸಭೆಯಲ್ಲಿ ಮನವಿ ಮಾಡಿದರು. ಹಿಂದೆಯೇ ಒಮ್ಮೆ ಸರ್ವೆ ಕಾರ್ಯ ಆಗಿದ್ದು ಆ ಮಾರ್ಗದ ಮಧ್ಯೆ ಎರಡು ಎಸ್ಟೇಟ್ ಇದ್ದು ರಸ್ತೆಗೆ ಒಪ್ಪಿಗೆ ಸೂಚಿಸಿವೆ .ತಾತ್ಕಾಲಿಕವಾಗಿ ನಮಗೆ ಕಚ್ಚ ರಸ್ತೆಯನ್ನು ಮಾಡಿಕೊಡುವಂತೆ ಗ್ರಾಮ ಸಭೆಯಲ್ಲಿ ಒತ್ತಾಯಿಸಿದರು ಇದಕ್ಕೆ ಉತ್ತರಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರು ಗ್ರಾಮ ಪಂಚಾಯಿತಿಗೆ ಲಿಖಿತವಾಗಿ ಮನವಿ ಸಲ್ಲಿಸಿ ನಂತರ ಪಂಚಾಯತ್ ಸಭೆಯಲ್ಲಿ ತೀರ್ಮಾನಿಸಿ ಕಚ್ಚ ರಸ್ತೆಯನ್ನು ಮಾಡಿಕೊಡುತ್ತೇವೆ ನಂತರ ನೂತನ ರಸ್ತೆಗೆ ಸಂಬಂಧಿಸಿದ ಇಲಾಖೆ ಜೊತೆ ಮಾತನಾಡಿ ಶಾಸಕರ ಗಮನಕ್ಕೆ ತರುತ್ತದೆ ಎಂದು ಹೇಳಿದರು.

ಸಮರ್ಪಕವಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲವೆಂದು ಗ್ರಾಮಸ್ಥರ ಪ್ರಶ್ನೆಗೆ ಮೆಸ್ಕಾಂ ಜೆ ಇ ಕೃಷ್ಣೆಗೌಡರು ಮುಂದಿನ ದಿನಗಳಲ್ಲಿ ಅದರ ಬಗ್ಗೆ ಮುತುವರ್ಜಿ ವಹಿಸಿ ನೆರಿಯ ಗ್ರಾಮಕ್ಕೆ ಹೆಚ್ಚುವರಿ ಲೈನ್ ಮ್ಯಾನ್ ನೇಮಿಸಿ ನಿಮ್ಮ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ತಿಳಿಸಿದರು ಬಾಂಜಾರು ಮಲೆ ಸಮುದಾಯ ಭವನ ಅಭಿವೃದ್ಧಿಪಡಿಸುವಂತೆ ಸಮಸ್ತರು ಒತ್ತಾಯಿಸಿದರು. ಸಂಬಂಧಪಟ್ಟ ಇಲಾಖೆ ಜೊತೆ ಮಾತನಾಡಿ ಹಾಗೂ ಪಂಚಾಯಿತ್ ಅನುದಾನ ಬಿಡುಗಡೆ ಮಾಡುತ್ತೆವೆ ಎಂದು ಅಧ್ಯಕ್ಷರು ತಿಳಿಸಿದರು .ನಂತರ ಅಧ್ಯಕ್ಷರು ಮಾತನಾಡಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಗ್ರಾಮಸ್ಥರು ಸಿಗುವ ಅನುದಾನವನ್ನು ಪಡೆದುಕೊಳ್ಳುವಂತೆ ತಿಳಿಸಿದರು ವಿದ್ಯುತ್ ಸಮಸ್ಯೆಯನ್ನು ಬಗೆಹರಿಸುವಂತೆ ಮೆಸ್ಕಾಂ ಜೆ ಇ ಅವರಲ್ಲಿ ತಿಳಿಸಿದರು.

ನೋಡಲ್ ಅಧಿಕಾರಿಯಾಗಿ ನೆರಿಯ ಪಶು ಸಂಗೋಪನೆ ಇಲಾಖೆಯ ವೈದ್ಯಾಧಿಕಾರಿಯಾಗಿದ್ದರು.

ಸಭೆಯಲ್ಲಿ ಕಂದಾಯ ಇಲಾಖೆಯ  ಗ್ರಾಮ ಕರಣಿಕ ಸಿದ್ದೇಶ್ , ಗ್ರಾಮ ಸಹಾಯಕ ಶ್ರೀನಿವಾಸ್, ಮೆಸ್ಕಾಂ ಜೆ ಕೃಷ್ಣೆಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ  ಇಲಾಖೆಯ ಮೇಲ್ವಿಚಾರಕಿ ,  ಉಪಾಧ್ಯಕ್ಷೆ ಕುಶಲ ಸಸ್ಯರಾದ ಸದಸ್ಯರಾದ ದಿನೇಶ್ ರಮೇಶ್ ಕೆ ಎಸ್ ಸವಿತಾ ರೀನಾ ವೇದಾವತಿ ಮಾಲತಿ ಮರಿಯಮ್ಮ ಅಶೋಕ ಉಪಸ್ಥಿತರಿದ್ದರು .

ಪಂಚಾಯತ್ ಸಿಬ್ಬಂದಿ ಮಧುಮಾಲ ವರದಿ ವಾಚಿಸಿದರು ಪಂಚಾಯತ್ಅಭಿವೃದ್ಧಿ ಅಧಿಕಾರಿ ಅಜಿತ್ ವರದಿವಾಚಿಸಿ ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here