ಗೆಜ್ಜೆಗಿರಿ ಯಕ್ಷಗಾನ ಮೇಳದ ಪ್ರಾರಂಭೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0


ಬೆಳ್ತಂಗಡಿ: ನ. 27 ರಂದು ಶ್ರೀ ಕ್ಷೇತ್ರ ಗೆಜ್ಜೆಗಿರಿ ಯಲ್ಲಿ ನಡೆಯುವ ಶ್ರೀಆದಿ ಧೂಮಾವತಿ ಶ್ರೀ ದೇಯಿ ಬೈದ್ಯೆತಿ ಯಕ್ಷಗಾನ ಮಂಡಲಿಯಉದ್ಘಾಟನೆ ಹಾಗೂ ಪ್ರಥಮ ಗೆಜ್ಜೆ ಸೇವೆಯ ಆಟದ ಆಮಂತ್ರಣ ಪತ್ರಿಕೆಯ  ಬಿಡುಗಡೆ ಸಮಾರಂಭವನ್ನು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸಭಾ ಭವನದಲ್ಲಿ  ನ.12ರಂದು  ಮಾಜಿ ಶಾಸಕ  ಕೆ.ವಸಂತ ಬಂಗೇರ ಬಿಡುಗಡೆಗೊಳಿಸಿ   ಕಾರ್ಯಕ್ರಮ ಯಶಸ್ವಿಯಾಗಲೆಂದು ಹಾರೈಸಿದರು.

ಯಕ್ಷಗಾನ ಮೇಳದ ಉದ್ದೇಶ ಮತ್ತು ವಿವರಣೆಗಳನ್ನು ಸಂಕ್ಷಿಪ್ತವಾಗಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಅಧ್ಯಕ್ಷರಾದ  ಪೀತಾಂಬರ ಹೇರಾಜೆ ಅವರು ವಿವರಿಸಿದರು.

ಈ ಸಂದರ್ಭದಲ್ಲಿ ಯಕ್ಷಗಾನ ಮೇಳದ ಮುಖ್ಯ ಸಂಚಾಲಕ ನವೀನ್ ಸುವರ್ಣ ಸಜೀಪ,  ಕ್ಷೇತ್ರಾಡಳಿತ ಸಮಿತಿಯ ಸದಸ್ಯೆ  ಸುಜಿತಾ ವಿ. ಬಂಗೇರ,  ಸಂಘದ ಮಾಜಿ ಅಧ್ಯಕ್ಷ  ಪದ್ಮನಾಭ ಮಾಣಿಂಜ,   ರಾಜು ಪೂಜಾರಿ ,  ಭಗೀರಥ.ಜಿ,  ಬೆಸ್ಟ್ ಫೌಂಡೇಷನ್ ನ ಅಧ್ಯಕ್ಷ ರಕ್ಷಿತ್ ಶಿವರಾಂ, ಸಂಘದ ಅಧ್ಯಕ್ಷ ,  ಪ್ರಧಾನ ಕಾರ್ಯದರ್ಶಿ  ಜಯವಿಕ್ರಂ,  ಕೋಶಾಧಿಕಾರಿ  ಅಭಿನಂದನ್ ಹರೀಶ್,  ಕಾರ್ಯದರ್ಶಿ ರಾಜೀವ ಸಾಲ್ಯಾನ್,  ಯುವ ಬಿಲ್ಲವ ವೇದಿಕೆ ಅಧ್ಯಕ್ಷ  ನಿತೀಶ್ ಪೂಜಾರಿ, ಯುವವಾಹಿನಿ ಅಧ್ಯಕ್ಷೆ  ಸುಜಾತಾ ಅಣ್ಣಿ ಪೂಜಾರಿ,   ರಾಜಶ್ರೀ ರಮಣ್,   ಶಾಂತಾ ಬಂಗೇರ, ಯಶೋದ ಕುತ್ಲೂರು, ಪ್ರೇಮಾ ಉಮೇಶ್, ವಿನೋದಿನಿರಾಮಪ್ಪ,  ಶ್ರೀನಾರಾಯಣ ಮಚ್ಚಿನ,  ಜಗದೀಶ್. ಡಿ ,ದಿನೇಶ್ ಕೋಟ್ಯಾನ್,  ಮನೋಹರ ಇಳಂತಿಲ, ಪದ್ಮನಾಭ ಸಾಲ್ಯಾನ್, ಹಿತೇಶ್,  ಸಂತೋಷ್ ಕಾಪಿನಡ್ಕ, ಸಂಪತ್ ಸುವರ್ಣ. ಡಿ. ಕೆ.ಸೂರ್ಯನಾರಾಯಣ ರಮೇಶ್ ಪೂಜಾರಿ, ಯಶೋಧರ ಚಾರ್ಮಾಡಿ ಹಾಗೂ ಇತರರು ಹಾಜರಿದ್ದರು.

ನಿತ್ಯಾನಂದ ನಾವರ ಸೇರಿದ್ದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.

LEAVE A REPLY

Please enter your comment!
Please enter your name here