ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೈರಲ್ಕೆ ಓಡಿಲ್ನಾಳ ಬ್ರಹ್ಮಕಲಶೋತ್ಸವದ ಪೂರ್ವ ತಯಾರಿ ಸಭೆ

0

ಓಡಿಲ್ನಾಳ: ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೈರಲ್ಕೆ ಓಡಿಲ್ನಾಳ ಬ್ರಹ್ಮಕಲಶೋತ್ಸವದ ಪಧಾದಿಕಾರಿಗಳ ಆಯ್ಕೆ ವಿವಿಧ ಸಮಿತಿಗಳ ಸಂಚಾಲಕರ ಆಯ್ಕೆ ಹಾಗೂ ಪೂರ್ವ ತಯಾರಿ ಸಭೆ ನ 12ರಂದು ತಂತ್ರಿಗಳಾದ ನಂದ ಕುಮಾರ್ ರವರ ಉಪಸ್ಥಿತಿಯಲ್ಲಿ ಶಾಸಕರು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಪೂಂಜಾ ರವರ ನೇತೃತ್ವದಲ್ಲಿ ದೇವಸ್ಥಾನದ ವಠಾರದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಹರೀಶ್ ಪೂಂಜ ಬ್ರಹ್ಮಕಲಶೋತ್ಸವದ ಯಶಸ್ವಿಯಾಗಿ ನಡೆಯಲು  ದೇವಸ್ಥಾನಕ್ಕೆ ಸಂಭಂದ ಪಟ್ಟ ಗ್ರಾಮದ ಪ್ರತಿ ಮನೆಯವರ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ ಎಲ್ಲರೂ ಒಟ್ಟಾಗಿ ಸೇರಿಕೊಂಡು ದೇವಸ್ಥಾನದ ಬ್ರಹ್ಮಕಲಶೋತ್ಸವ ಯಶಶ್ವಿಗೊಳಿಸೋಣ ಎಂದರು.

ವೇದಿಕೆಯಲ್ಲಿ ಜೀರ್ಣೋದ್ದಾರ ಸಮಿತಿ ಕಾರ್ಯಧ್ಯಕ್ಷರು ಜಯರಾಮ್ ಶೆಟ್ಟಿ ಪಡಂಗಡಿ, ಕೋಶಾಧಿಕಾರಿ ಗೋಪಾಲ ಶೆಟ್ಟಿ ಕೋರ್ಯಾರು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಧ್ಯಕ್ಷ ರಾಜ್ ಪ್ರಕಾಶ್ ಪಡ್ಡೈಲು, ಪ್ರಧಾನ ಕಾರ್ಯದರ್ಶಿ ದರಣೇಂದ್ರ ಕೆ ಜೈನ್ ,  ಓಡಿಲ್ನಾಳ ಧರ್ಮೋತ್ಥಾನ ಟ್ರಸ್ಟ್ ನ ಅಧ್ಯಕ್ಷ ವ್ರಷಭ ಆರಿಗ ಪರಾರಿ ಗುತ್ತು, ಯುವ ಸಮಿತಿ ಅಧ್ಯಕ್ಷ ಚಿದಾನಂದ ಇಡ್ಯ, ಮಹಿಳಾ ಸಮಿತಿ ಅಧ್ಯಕ್ಷೆ ಪುಷ್ಪಾವತಿ, ಪವಿತ್ರ ಪಾಣಿ ಮೋಹನ್ ಕೆರ್ಮುಣ್ಣಾಯ ಮೈರಾರು, ಎಸ್ ಗಂಗಾಧರ ರಾವ್ ಕೆವುಡೇಲು, ಕುವೆಟ್ಟು ಗ್ರಾ ಪಂ ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ ಉಪಸ್ಥಿತರಿದ್ದರು.

ಸಭೆಯಲ್ಲಿ ವಿವಿಧ ಸಮಿತಿಗಳ ಸಂಚಾಲಕರು ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here