ನಿಡ್ಲೆ ಪ್ರೌಢ ಶಾಲೆಗೆ ರಕ್ಷಿತ್ ಶಿವರಾಂ ಭೇಟಿ : ಶಾಲಾ ಮಕ್ಕಳಿಗೆ ಊಟದ ತಟ್ಟೆ ಹಾಗೂ ಲೋಟ ವಿತರಣೆ

0

ನಿಡ್ಲೆ: ನಿಡ್ಲೆ  ಪ್ರೌಢ ಶಾಲೆಯಲ್ಲಿ ಪಂಚಾಯತ್ ಮತ್ತು ಶಾಲಾ ವತಿಯಿಂದ ಮಗುವಿಗೊಂಡು ಪುಸ್ತಕ ನೀಡಿ ಕಾರ್ಯಕ್ರಮ ನ.19ರಂದು ನಿಡ್ಲೆ ಪ್ರೌಢ ಶಾಲೆಯಲ್ಲಿ ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಮತ್ತು ನಿಡ್ಲೆ ಪಂಚಾಯತ್ ಹಾಗೂ ಶಾಲಾ ವತಿಯಿಂದ ಮಕ್ಕಳಿಗೆ ಪುಸ್ತಕ ಮತ್ತಿತರ ಸಾಮಗ್ರಿಗಳನ್ನು ನೀಡಲಾಯಿತು.

ಬೆಳ್ತಂಗಡಿ ಬೆಸ್ಟ್ ಪೌಂಡೇಶನ್ ಟ್ರಸ್ಟ್ ಸ್ಥಾಪಕರಾದ ರಕ್ಷಿತ್ ಶಿವರಾಮ್ ಇವರು ಶಾಲಾ ಮಕ್ಕಳಿಗೆ ಊಟದ ತಟ್ಟೆ ಹಾಗೂ ಲೋಟವನ್ನು ನೀಡಿದರು ಹಾಗೂ ಮಹಾಗಣಪತಿ ಭಜನಾ ಮಂದಿರದಿಂದ ಬಾಲಕರಿಗೆ ಬೆಲ್ಟ್ ನ್ನು ನೀಡಲಾಯಿತು.

ಈ ಸಂದರ್ಭ ವೇದಿಕೆಯಲ್ಲಿ ನಿಡ್ಲೆ ಪಂಚಾಯತ್ ಉಪಾಧ್ಯಕ್ಷರಾದ ಶ್ಯಾಮಲ ಹಾಗೂ ಸದಸ್ಯರಾದ ಜಗದೀಶ ನಿಡ್ಲೆ,ಹೇಮಾವತಿ ಅಲ್ತಿಮಾರು ,ಶಾಲಾಬಿವೃದ್ದಿ ಸಮಿತಿ ಅದ್ಯಕ್ಷರಾದ ಪುರುಶೋತ್ತಮ ಗೌಡ ನಿವೃತ್ತ ಶಿಕ್ಷಕರಾದ ಪ್ರಪುಲ್ಲ ಟೀಚರ್ , ಪಂಚಾಯತ್ ಅಬಿವೃದ್ದಿ ಅದಿಕಾರಿ ರವಿ ,ಭಜನಾಮಂಡಳಿಯ ಅದ್ಯಕ್ಷರಾದ ಜಯಂತ ಬಂಗೇರ ,ಶಾಲಾ ಮುಖ್ಯಶಿಕ್ಷಕರಾದ ಶಾಂತ ಶೆಟ್ಟಿ,ಲೈಬ್ರೇರಿಯ ಶಕುಂತಲಾ ಶೆಟ್ಟಿ ಮತ್ತು ಭಜನಾ ಮಂಡಳಿ ಸದಸ್ಯರು ಹಾಗೂ ಊರಿನವರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here