ಶ್ರೀ ರಾಮ ಕ್ಷೇತ್ರ ಹರಿದ್ವಾರ ಶಾಖಾ ಮಠದಲ್ಲಿ ವಾರ್ಷಿಕ ಆಚರಣೆ

0

ಕನ್ಯಾಡಿ: ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನಮ್ ಇದರ ಶಾಖಾ ಮಠ ಹರಿದ್ವಾರದಲ್ಲಿ ಕ್ಷೇತ್ರದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಮತ್ತು ನೇತೃತ್ವದಲ್ಲಿ ನ.25 ರಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.

ಈ ಸಂದರ್ಭದಲ್ಲಿ ರಾಜಸ್ಥಾನದ ಉದ್ಯಮಿ ಭಗವತಿ ಪ್ರಸಾದ್ ಬಿಹಾನಿ ದಂಪತಿ ಪಾದುಕ ಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಠದ ಟ್ರಷ್ಟಿಗಳಾದ ತುಕಾರಾಮ ಸಾಲಿಯಾನ್,ಕೃಷ್ಣಪ್ಪ ಗುಡಿಗಾರ್, ರವೀಂದ್ರ ಪೂಜಾರಿ ಅರ್ಲ, ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿಯ ದ. ಕ. ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಮಂಗಳೂರು ಕಾರ್ಪೋರೇಟರ್ ಕಿರಣ್ ಕುಮಾರ್, ನಾವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಗೌಡ ಅಶೋಕ್ ಕುಮಾರ್ ಕಡಿರುದ್ಯಾವರ, ವಿನಯ ಕುಮಾರ್ ಮಿತ್ತಬಾಗಿಲು, ಗೋವಿಂದ ನಾಯ್ಕ ಭಟ್ಕಳ, ಸೀತಾರಾಮ ಬಿ. ಎಸ್. ಬೆಳಾಲು, ಪುರುಷೋತ್ತಮ ಸಾಲಿಯಾನ್, ಇನ್ನಿತರ ಭಕ್ತ ರು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here