ನಾಗತೀರ್ಥ ಶಾಲಾ ಶಿಕ್ಷಕಿ ಶ್ರೀಮತಿ ಸೀತಾ ಎಸ್. ನಿವೃತ್ತಿ

0

ಕೂತ್ಕುಂಜ ಗ್ರಾಮದ ನಾಗತೀರ್ಥ ಶಾಲೆಯ ಶಿಕ್ಷಕಿ ಶ್ರೀಮತಿ ಸೀತಾ.ಎಸ್ ರವರು ಆ.30 ರಂದು ನಿವೃತ್ತರಾಗಿದ್ದಾರೆ.
ಅವರು ಪಂಜದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಗುಂಡಡ್ಕ ಗಂಗಾಧರ ಗೌಡ ರವರ ಪತ್ನಿ.ಪುತ್ತೂರು ತಾಲೂಕು ವೀರಮಂಗಲ ಸೋಮಪ್ಪ ಗೌಡ ಮತ್ತು ಶ್ರೀಮತಿ ಉಮ್ಮಕ್ಕ ದಂಪತಿಗಳ ಹಿರಿಯ ಪುತ್ರಿ ಮಡಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆಯನ್ನು ಪ್ರಾರಂಭಿಸಿ 4 ವರ್ಷಗಳ ಕಾಲ ಸೇವೆ ಸಲ್ಲಿಸಿ ,ನಂತರ ನಾಗತೀರ್ಥ ಶಾಲೆಗೆ ವರ್ಗಾವಣೆಗೊಂಡು ಕರ್ತವ್ಯಕ್ಕೆ ಹಾಜರಾದರು.

ಇಲ್ಲಿ 2ವರ್ಷಗಳ ಕಾಲ ಪ್ರಭಾರ ಮುಖ್ಯೋಪಾಧ್ಯಾಯನಿಯಾಗಿ ಕಾರ್ಯನಿರ್ವಹಿಸಿದರು. ಆ ಅವಧಿಯಲ್ಲಿ ಎಸ್ .ಡಿ .ಎಂ. ಸಿ ಮತ್ತು ಪೋಷಕರ ಸಹಕಾರದೊಂದಿಗೆ ಪ್ರಪ್ರಥಮವಾಗಿ ಶ್ರೀ ಶಾರದಾ ಪೂಜೆಯನ್ನು ಪ್ರಾರಂಭಿಸಿದ್ದರು. ಶಾಲೆಯ ಸುತ್ತ ತೆಂಗಿನ ಗಿಡಗಳನ್ನು ನೆಟ್ಟು ಬೆಳೆಸಿ ಇದೀಗ ಬಿಸಿ ಊಟಕ್ಕೆ ಸಹಕಾರಿಯಾಗಿದೆ. ಒಟ್ಟು 28 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಇವರ ಪುತ್ರ ಚೇತನ್ ಜಿ. ಜಿ ಹೈದರಾಬಾದ್ ನಲ್ಲಿ ಹೈಫ್ಲೈ ಪ್ರಾಜೆಕ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ನಡೆಸುತ್ತಿದ್ದಾರೆ. ಸೊಸೆ ಶ್ರೀಮತಿ ರಶ್ಮಿ ಹೈದರಾಬಾದ್ ನಲ್ಲಿ ಡ್ಯೂ ಪಾಯಿಂಟ್ ಲೈಫ್ ಸೈನ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಪುತ್ರಿ ಶ್ರೀಮತಿ ಡಾ.ಚೈತ್ರ ಜಿ.ಜಿ ಶಿವಮೊಗ್ಗ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಅಳಿಯ ಜೀವನ್ ಉಪ್ಪಳಿಕೆ ನಗರ ನೀರು ಸರಬರಾಜು ಇಲಾಖೆ ಶಿವಮೊಗ್ಗದಲ್ಲಿ ಸಹಾಯಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೊಮ್ಮಕ್ಕಳಾದ ಶಿವಾಂಶ್ ಉಪ್ಪಳಿಕೆ, ಮಾಸ್ಟರ್ ದಿಯಾನ್ ಖುಷಿ ಗುಂಡಡ್ಕ . ಶಾಲೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ರೂ. 25,000 ಶಾಶ್ವತ ದತ್ತಿ ನಿಧಿಯನ್ನು ಶಾಲೆಗೆ ಕೊಟ್ಟಿರುತ್ತದೆ ಅಲ್ಲದೆ ಶಾಲಾ ವಿದ್ಯಾರ್ಥಿಗಳಿಗೆ, ಎಲ್ ಕೆ ಜಿ, ಯು ಕೆ ಜಿ ಮತ್ತು ಅಂಗನಾಡಿ ಪುಟಾಣಿಗಳಿಗೆ ಸ್ಮರಣಿಕೆ ನೀಡಿರುತ್ತಾರೆ

 

LEAVE A REPLY

Please enter your comment!
Please enter your name here