ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ಗಣೇಶ ಚತುರ್ಥಿ ಆಚರಣೆ – ಗಣಹೋಮ, ಭಜನಾ ಸತ್ಸಂಗ

0

 

ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ಗಣೇಶ ಚತುರ್ಥಿ ಹಬ್ಬದ ನಿಮಿತ್ತ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

 

ನಿವೃತ್ತ ಶಿಕ್ಷಣ ಸಂಯೋಜಕ ಕೇಶವ ಧಾರ್ಮಿಕ ಉಪನ್ಯಾಸ ನೀಡಿದರು.

ಆಶ್ರಮದ ಸ್ಚಾಮಿಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರು ಶುಭ ಹಾರೈಸಿದರು.

 

ಆಶ್ರಮದ ಟ್ರಸ್ಟಿ ಪ್ರಣವಿ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಪೊಲೀಸ್ ಚಾಮಯ್ಯ ಗೌಡ ಅಡ್ಪಂಗಾಯ ಮುಖ್ಯ ಅತಿಥಿಯಾಗಿಯಾಗಿ ಭಾಗವಹಿಸಿದರು.
ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಅನಿಲ್ ಬಿ.ವಿ ಸ್ವಾಗತಿಸಿದರು.ರೇಖಾ ಅನಿಲ್ ವಂದಿಸಿದರು.
ಮೇಗಶ್ಯಾಮ್ ಅಡ್ಪಂಗಾಯ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಆಶ್ರಮದ ಟ್ರಸ್ಟಿಗಳಾದ ನಿವೃತ್ತ ಎ ಎಸ್ ಐ ಕುಶಾಲಪ್ಪ ಗೌಡ ಅತ್ಯಾಡಿ,ಶಶ್ಮಿ ಭಟ್,ಜನಾರ್ದನ ಮಾಸ್ತರ್ ಇತರರು ಉಪಸ್ಥಿತರಿದ್ದರು.
ಗಣಹೋಮ ಭಜನಾ ಸತ್ಸಂಗ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here