ಕೋಲ್ಚಾರು ವಯನಾಟ್ ಕುಲವನ್ ದೈವಸ್ಥಾನದಲ್ಲಿ ಪ್ರಶ್ನಾ ಚಿಂತನೆ

0

 ದೈವಂಕಟ್ಟು ಮಹೋತ್ಸವಕ್ಕೆ ತೀರ್ಮಾನ-ನೂತನ ಸಮಿತಿ ರಚನೆ

ಕೋಲ್ಚಾರು ಕುಟುಂಬದ ಶ್ರೀ ವಯನಾಟ್ ಕುಲವನ್ ದೈವಸ್ಥಾನ ಕೋಲ್ಚಾರಿನಲ್ಲಿ ದೈವಜ್ಞ ಭಿಮಂಗಲ್ಲು ರತ್ನಾಕರ ರವರ ನೇತೃತ್ವದಲ್ಲಿ ಆ.29 ರಂದು ಪ್ರಶ್ನಾ ಚಿಂತನೆಯು ನಡೆಯಿತು.

 

ಈ ಸಂದರ್ಭದಲ್ಲಿ ಕುತ್ತಿಕೋಲು ಶ್ರೀ ತಂಬುರಾಟ್ಟಿ ಭಗವತಿ ಕ್ಷೇತ್ರದ ಸ್ಥಾನಿಕರು ಮತ್ತು ಆಡಳಿತ ಸಮಿತಿಯ ಪದಾಧಿಕಾರಿಗಳು,
ಕೋಲ್ಚಾರು ಕುಟುಂಬದ ಯಜಮಾನರು ಮತ್ತು ದೈವಸ್ಥಾನದ ಅಧ್ಯಕ್ಷರು ಹಾಗೂ ಎಲ್ಲಾ ಹಿರಿಯ ಕಿರಿಯ ಸದಸ್ಯರು, ಭಾರತೀಯ ತೀಯಾ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಮುಂದಿನ ವರ್ಷ ಮೇ. 16 ರಿಂದ 18 ರ ವರೆಗೆ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ನಡೆಸುವುದಾಗಿ ದೈವಜ್ಞರ ಸಲಹೆಯಂತೆ ತೀರ್ಮಾನಿಸಲಾಯಿತು. ಏಪ್ರಿಲ್. 16 ರಂದು ಉಗ್ರಾಣ ತುಂಬುವುದು 26 ರಂದು ಭತ್ತ ಅಳೆಯುವ ಕಾರ್ಯಕ್ರಮ ನಡೆಯಲಿದೆ.

ಗ್ರಾಮದ ಮತ್ತು ನೆರೆಯ ಗ್ರಾಮದ ತರವಾಡು ಮನೆತನದ ಮತ್ತು ವಯನಾಟ್ ಕುಲವನ್ ದೈವಸ್ಥಾನದ ಆಡಳಿತ ಮೊಕ್ತೇಸರರು, ಕುಟುಂಬದ ಹಿರಿಯರು ಮತ್ತು ಸದಸ್ಯರು ಹಾಗೂ ಸ್ಥಳೀಯರಾದ ಹರೀಶ್ ಕೊಯಿಂಗಾಜೆ, ಮುತ್ತಣ್ಣ ಮಾಸ್ತರ್ , ಕೊರಗಪ್ಪ ಮಾಸ್ತರ್ ಕಣಕ್ಕೂರು, ಮಾಧವ ಗೌಡ ಕಲ್ಲೆಂಬಿ, ಕುಂಞಕಣ್ಣನ್ ಕುತ್ತಿಕೋಲು, ಶ್ರೀಧರನ್ ಪರಂಬಳ್ಳ, ಮನ್ಮಥ ಅಡ್ಪಂಗಾಯ, ನವೀನ್ ರೈ ಮೇನಾಲ, ಸುಧಾಮ ಆಲೆಟ್ಟಿ, ಮೋಹನ್ ಅರಂಬೂರು ಮತ್ತಿತರರು ಉಪಸ್ಥಿತರಿದ್ದರು.

ಮಹೋತ್ಸವದ ನೂತನ ಸಮಿತಿ ಅಧ್ಯಕ್ಷರಾಗಿ ಭಗೀರಥ ಕೋಲ್ಚಾರು, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಬಳ್ಯಾಡಿ,ಖಜಾಂಜಿ ಶಿವಪ್ರಸಾದ್ ಕೆ.ಆರ್ ಕೋಲ್ಚಾರು, ಕಾರ್ಯಾಧ್ಯಕ್ಷ ಚಂದ್ರ ಕೋಲ್ಚಾರು, ಸಂ. ಕಾರ್ಯದರ್ಶಿ ರಾಧಾಕೃಷ್ಣ ಕೋಲ್ಚಾರು, ಸಂಚಾಲಕ ರಾಗಿ ಸೋಮಶೇಖರ ಗೌಡ ಕೊಯಿಂಗಾಜೆ, ಜಯಪ್ರಕಾಶ್ ಕುಂಚಡ್ಕ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.


ಕುತ್ತಿಕೋಲು ಶ್ರೀ ತಂಬುರಾಟ್ಟಿ ಕ್ಷೇತ್ರದ ಸ್ಥಾನಿಕರು ಪ್ರಾರ್ಥನೆ ನೆರವೇರಿಸಿದರು.
ಪುರುಷೋತ್ತಮಕೋಲ್ಚಾರು ಸ್ವಾಗತಿಸಿದರು. ರಾಧಾಕೃಷ್ಣ ಕೋಲ್ಚಾರು ವರದಿ ವಾಚಿಸಿದರು. ಭಾರತೀಯ ತೀಯ ಸಮಾಜದ ತಾಲೂಕು ಸಮಿತಿ ಅಧ್ಯಕ್ಷ ಪವಿತ್ರನ್ ಗುಂಡ್ಯ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here