ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ.ಸಂಘದಿಂದ ನೆರೆ ಸಂತ್ರಸ್ತ ಕುಟುಂಬಕ್ಕೆ ಸಹಾಯಹಸ್ತ

0

 

45 ಮನೆಗಳಿಗೆ ಸಹಾಯಹಸ್ತದ ಆಸರೆ

ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ.ಸಂಘದ ವತಿಯಿಂದ ನೆರೆ ಹಾನಿಗೊಳಗಾದ ಹರಿಹರ, ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು ಗ್ರಾಮಗಳ ಮನೆಯವರಿಗೆ ಸಹಾಯ ಹಸ್ತ ನೀಡಲಾಯಿತು. ಮನೆ ಹಾನಿಗೊಳಗಾದ 42 ಮನೆಗಳಿಗೆ ತಲಾ ಮೂರು ಸಾವಿರದಂತೆ ಹಾಗೂ ಮನೆ ಕಳೆದುಕೊಂಡ 3 ಮನೆಯವರಿಗೆ ತಲಾ 6 ಸಾವಿರದಂತೆ ಸಹಾಯ ಹಸ್ತ ನೀಡಲಾಯಿತು.


ಈ ಸಂದರ್ಭ ಸೊಸೈಟಿಯ ಅಧ್ಯಕ್ಷ ಹರ್ಷಕುಮಾರ್ ದೇವ ಜನ, ಉಪಾಧ್ಯಕ್ಷ ಶೇಖರ ಅಂಬೆಕಲ್ಲು, ನಿರ್ದೇಶಕರುಗಳಾದ ವಿನೂಪ್ ಮಲ್ಲಾರ, ಮಣಿಕಂಠ ಕೊಳಗೆ, ತಾರನಾಥ ಮುಂಡಾಜೆ, ಗಿರೀಶ್ ಕಟ್ಟಮನೆ, ವಿಜಯ ಕಜ್ಜೋಡಿ, ವಿಜಯ ಕೂಜುಗೋಡು, ಮೋನಪ್ಪ ಕೊಳಗೆ, ಸುರೇಶ್ ಚಾಳೆಪ್ಪಾಡಿ, ರಾಜೇಶ್ ಪರಮಲೆ, ಬೊಳಿಯ ಬೆಂಡೋಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನ ಮನೆ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಹೂವಪ್ಪ ಗೌಡ , ಸಿಬ್ಬಂದಿಗಳು, ಫಲಾನುಭವಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here