ಶಿಬರಾಡಿ ಬಾರಿಕೆ ಕುಂದರ್ ಕುಟುಂಬದಲ್ಲಿ ವಾರ್ಷಿಕ ನೇಮೋತ್ಸವ

0

ಪುತ್ತೂರು: ತಾಲೂಕಿನ ಕುರಿಯ ಗ್ರಾಮದ ಶಿಬರಾಡಿ ಬಾರಿಕೆ ಕುಂದರ್ ಕುಟುಂಬದಲ್ಲಿ ಗ್ರಾಮದ ಉಳ್ಳಾಕುಲು, ಮಹಿಷಂತಾಯ ಮತ್ತು ಪಿಲಿಚಾಮುಂಡಿ ದೈವಗಳಿಗೆ ತಂಬಿಲ ಸೇವೆ ಹಾಗೂ ತರವಾಡು ಮನೆಯ ದೈವಗಳ ವಾರ್ಷಿಕ ನೇಮೋತ್ಸವವು ಜ.30 ಹಾಗೂ 31 ರಂದು ಶಿಬರಾಡಿ ಬಾರಿಕೆ ತರವಾಡು ಮನೆಯಲ್ಲಿ ಜರಗಿತು.

ಆದಿತ್ಯವಾರದಂದು ಬೆಳಿಗ್ಗೆ ಶ್ರೀ ಗಣಪತಿ ಹೋಮ, ಗ್ರಾಮ ದೈವಗಳಿಗೆ ತಂಬಿಲ ಸೇವೆ, ನಾಗದೇವರಿಗೆ ಮತ್ತು ರಕ್ತೇಶ್ವರಿ, ಗುಳಿಗನಿಗೆ ತಂಬಿಲ ಸೇವೆ, ಮಧ್ಯಾಹ್ನ ಹರಿಸೇವೆ, ಅನ್ನಸಂತರ್ಪಣೆ, ಸಂಜೆ ಜಾಗದ ರಾಹು ಗುಳಿಗನಿಗೆ ತಂಬಿಲ ಸೇವೆ ಬಳಿಕ ಭಂಡಾರ ತೆಗೆಯುವುದು, ರಾತ್ರಿ ಅನ್ನ ಸಂತರ್ಪಣೆ, ಕಲ್ಲುರ್ಟಿ ಹಾಗೂ ಕಲಾಲ್ದಗುಳಿಗ ನೇಮ, ವರ್ಣರ ಹಾಗೂ ಕುಪ್ಪೆ ಪಂಜುರ್ಲಿ ನೇಮ, ಸೋಮವಾರದಂದು ಬೆಳಿಗ್ಗೆ ಧರ್ಮದೈವ ಧೂಮಾವತಿ ನೇಮ, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.

ಅರ್ಚಕರಾದ ಪ್ರಕಾಶ್ ರಾವ್ ಕೊಡ್ಲಾರುರವರ ನೇತೃತ್ವದಲ್ಲಿ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಸುಮಾರು ಸಾವಿರಕ್ಕೂ ಮಿಕ್ಕಿ ಭಕ್ತಾಧಿಗಳು ಆಗಮಿಸಿ ಶ್ರೀ ದೈವಗಳ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ದೈವಗಳ ಕೃಪೆಗೆ ಪಾತ್ರರಾದರು.

ಕೃತಜ್ಞತೆಗಳು…
ನೇಮೋತ್ಸವವು ಶಿಸ್ತುಬದ್ಧವಾಗಿ ಉತ್ತಮ ರೀತಿಯಲ್ಲಿ ಹಾಗೂ ಅಚ್ಚುಕಟ್ಟಾಗಿ ನಡೆಯಲು ಸೂಕ್ತ ಸಂದರ್ಭದಲ್ಲಿ ಸಲಹೆ ಸೂಚನೆ ನೀಡಿದ ಕುಟುಂಬದ ಹಿರಿಯ-ಕಿರಿಯ ಬಂಧುಗಳಿಗೆ, ವಿಶೇಷ ಮುತುವರ್ಜಿ ವಹಿಸಿ ಯಶಸ್ವಿಯತ್ತ ಸಾಗಿಸಿದ ತರವಾಡಿನ ಪೂಜಾರಿ ವರ್ಗಕ್ಕೆ, ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟ ಪುರೋಹಿತ ವರ್ಗಕ್ಕೆ, ನೇಮೋತ್ಸವ ದಿನ ವಿವಿಧ ವರ್ಗದಲ್ಲಿ ಸಹಕರಿಸಿದ ಚಕ್ರಿ ವರ್ಗದವರಿಗೆ ಹಾಗೂ ತರವಾಡಿನ ಎಲ್ಲಾ ಕೆಲಸಗಳಲ್ಲಿ ತೊಡಗಿಸಿಕೊಂಡು ಸ್ವಯಂಸೇವಕರಾಗಿ ದುಡಿದ ಎಲ್ಲಾ ಕುಟುಂಬಸ್ಥರಿಗೆ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು ಶಶಿಧರ್ ಕಿನ್ನಿಮಜಲು, ಅಧ್ಯಕ್ಷರು, ಶಿಬರಾಡಿ ಬಾರಿಕೆ ಕುಂದರ್ ಕುಟುಂಬ

LEAVE A REPLY

Please enter your comment!
Please enter your name here