ಆದಿ ಗ್ರಾಮೋತ್ಸವದಲ್ಲಿ ಅಪೂರ್ವ ಕಾರಂತರಿಗೆ ಯುವ ಸಿರಿ ಪ್ರಶಸ್ತಿ

0

 


ಪುತ್ತೂರು: ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ರಾಜ್ಯಾಧ್ಯಕ್ಷ ಡಾ.ಶೇಖರ್ ಅಜೆಕಾರ್ ನೇತೃತ್ವದಲ್ಲಿ ಕಾರ್ಕಳದ ಅಜೆಕಾರಿನ ಕುರ್ಪಾಡಿಯ ಶ್ರೀಬೊಬ್ಬರ್ಯ ಸ್ಥಾನದ ಆದಿ ಮಂಟಪಲ್ಲಿ ನಡೆದ ೨೩ನೇ ಆದಿ ಗ್ರಾಮೋತ್ಸವ ಕಾರ್ಯಕ್ರಮದಲ್ಲಿ ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅಪೂರ್ವ ಕಾರಂತ್ ರವರಿಗೆ ಯುವ ಸಿರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಇಂಜಿನಿಯರ್ ಪಧವೀಧರೆ ಆಗಿರುವ ಇವರು ನಿರೂಪಕಿಯಾಗಿ, ಹಾಡುಗಾರ್ತಿಯಾಗಿ, ನೃತ್ಯಗಾರ್ತಿಯಾಗಿ, ಕವಯತ್ರಿಯಾಗಿ ಹಲವು ಸಾಧನೆ ಮಾಡಿದ್ದಾರೆ. ಇವರು ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಭಾವನಾಹಕ್ಕಿ ನನ್ನೆದೇಲಿ ಹಾರಾಡಿದಾಗ ಎಂಬ ಕವನ ಸಂಕಲನವನ್ನು ಹೊರತಂದಿದ್ದಾರೆ. ಕಲಾ ಕ್ಷೇತ್ರದಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿದ್ದಾರೆ. ಸೀಡ್ಸ್ ಆಫ್ ಹೋಫ್ ಆಯೋಜಿಸಿದ ಕ್ಯಾನ್ಸರ್ ರೋಗಿಗಳಿಗೆ ಕೇಶದಾನ ಯೋಜನೆಯಲ್ಲಿ ತಮ್ಮ ೮ ಇಂಚು ತಲೆಗೂದಲನ್ನು ದಾನ ಮಾಡಿದ್ದಾರೆ. ಇವರು ಶಿಕ್ಷಕ ವೆಂಕಟರಮಣ ಕಾರಂತ್ ಮತ್ತು ಸಂಧ್ಯಾ ಕಾರಂತ್ ದಂಪತಿ ಪುತ್ರಿಯಾಗಿದ್ದು ಪ್ರಸ್ತುತ ದರ್ಬೆ ನಿವಾಸಿಯಾಗಿದ್ದಾರೆ.

LEAVE A REPLY

Please enter your comment!
Please enter your name here