ಮೃತಪಟ್ಟ ಗೃಹರಕ್ಷಕನ ಕುಟುಂಬಕ್ಕೆ ಗೃಹರಕ್ಷಕ ಕ್ಷೇಮಾಭಿವೃದ್ಧಿ ನಿಧಿಯಿಂದ ಧನಸಹಾಯ

0

ಪುತ್ತೂರು: ಕೋವಿಡ್‌ನಿಂದಾಗಿ ಮೃತಪಟ್ಟ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಪುತ್ತೂರು ಘಟಕದ ಗೃಹರಕ್ಷಕರಾಗಿದ್ದ ದಿ. ಜಗದೀಶ್ ಹೆಗ್ಡೆ ಕುಟುಂಬಕ್ಕೆ ಗೃಹರಕ್ಷಕರ ಕ್ಷೇಮಾಭಿವೃದ್ಧಿ ನಿಧಿಯಿಂದ ಧನಸಹಾಯವನ್ನು ಫೆ. 13ರಂದು ನೀಡಲಾಯಿತು.

ಗೃಹರಕ್ಷಕದಳದ ಸಮಾದೇಷ್ಟರ ಡಾ.ಮುರಲೀ ಮೋಹನ್ ಚೂಂತಾರು ಅವರ ಶಿಫಾರಸ್ಸಿನ ಮೇರೆಗೆ ಇವರ ಕುಟುಂಬಕ್ಕೆ ಕೇಂದ್ರ ಕಛೇರಿಯಿಂದ ಗೃಹರಕ್ಷಕರ ಕ್ಷೇಮಾಭಿವೃದ್ಧಿ ನಿಧಿಯಿಂದ ಸಹಾಯ ಧನವನ್ನು ಮಂಜೂರು ಮಾಡಿದ್ದರು. ಸಹಾಯಧವನ್ನು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಮೃತ ಜಗದೀಶ್ ಹೆಗ್ಡೆಯವರ ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿ, ಜಗದೀಶ್ ಹೆಗ್ಡೆಯವರ ಪತ್ನಿ ಹೊನ್ನಮ್ಮ ಅವರಿಗೆ ರೂ. 10ಸಾವಿರವನ್ನು ಚೆಕ್ ಮೂಲಕ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪುತ್ತೂರು ಘಟಕದ ಘಟಕಾಧಿಕಾರಿ ಅಭಿಮಾನ್ಯು ರೈ, ಗೃಹರಕ್ಷಕರಾದ ದಿವಾಕರ್, ದುಷ್ಯಂತ್ ಮುಂತಾದವರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here