ಫೆ.15-16 ; ಪುಣ್ಚಪ್ಪಾಡಿ, ಸಾರಕರೆ ಬೀಡು ಶ್ರೀ ಧರ್ಮಅರಸು ಉಳ್ಳಾಕುಲು, ಪರಿವಾರ ದೈವಗಳ ಧರ್ಮ ನಡಾವಳಿ ಜಾತ್ರೋತ್ಸವ

0

 

ಪುತ್ತೂರು: ಪುಣ್ಚಪ್ಪಾಡಿ ಗ್ರಾಮದ ಸಾರಕರೆ ಬೀಡು ಶ್ರೀ ಧರ್ಮಅರಸು ಉಳ್ಳಾಕುಲು ದೈವಸ್ಥಾನದಲ್ಲಿ  ಫೆ.15 ಮತ್ತು 16 ರಂದು ಶ್ರೀ ಧರ್ಮಅರಸು ಉಳ್ಳಾಕುಲು ಮತ್ತು ಪರಿವಾರ ದೈವಗಳ ಧರ್ಮ ನಡಾವಳಿ ಜಾತ್ರೋತ್ಸವ ಜರಗಲಿದೆ. ಫೆ.15 ರಂದು ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮದಲ್ಲಿ ವೇದಮೂರ್ತಿ ಕೇಶವ ಕಲ್ಲೂರಾಯ ಬಂಬಿಲರವರ ನೇತೃತ್ವದಲ್ಲಿ ಬೆಳಿಗ್ಗೆ 9 ರಿಂದ ಶ್ರೀ ಗಣಪತಿ ಹೋಮ, ನಾಗತಂಬಿಲ, ಗೊನೆ ಕಡಿಯುವುದು, ದೈವಗಳ ತಂಬಿಲ, ಬೊಟ್ಟಿ ಭೂತ ತಂಬಿಲ, ಸಂಜೆ 4 ರಿಂದ ನೇರೊಳ್ತಡ್ಕದಿಂದ ಕಲ್ಲ ಮಾಡದವರೆಗೆ ಹಸಿರುವಾಣಿ ಮೆರವಣಿಗೆ ನಡೆಯಲಿದೆ. ವಿಜಯ ಬ್ಯಾಂಕ್‌ನ ನಿವೃತ್ತ ಪ್ರಬಂಧಕ ಎ.ಕೃಷ್ಣ ರೈ ಪುಣ್ಚಪ್ಪಾಡಿಬೀಡುರವರು ಹಸಿರುವಾಣಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸಂಜೆ 5.30 ರಿಂದ ಶ್ರೀ ದುರ್ಗಾ ನಮಸ್ಕಾರ ಪೂಜೆ ಮತ್ತು ಭಜನಾ ಕಾರ್ಯಕ್ರಮ, ಸಂಜೆ 7 ರಿಂದ ಶ್ರೀ ಧರ್ಮಅರಸು ಉಳ್ಳಾಕುಲು ಮತ್ತು ಪರಿವಾರ ದೈವಗಳ ಕಿರುವಾಳು ಭಂಡಾರ ಮೂಲಸ್ಥಾನದಿಂದ ಕಲ್ಲಮಾಡಕ್ಕೆ ರುವುದು. ಸಂಜೆ. 7.15 ರಿಂದ ಸಾರಕರೆ ಬೆಡಿ ಪ್ರದರ್ಶನ, ರಾತ್ರಿ 8.30ರಿಂದ ಅನ್ನಸಂತರ್ಪಣೆ ಜರಗಲಿದೆ.

 

ಫೆ. 16 ರಂದು ಬೆಳಿಗ್ಗೆ 7.30ಕ್ಕೆ ಉಪಹಾರ, ಬೆಳಿಗ್ಗೆ 8.30ರಿಂದ ಎಲ್ಕಾರ್ ಉಳ್ಳಾಕುಲು ದೈವದ ಓಲಸರಿ ನೇಮೋತ್ಸವ. ಬೆಳಿಗ್ಗೆ 11ರಿಂದ ಮಲ್ಲಾರ್ ಉಳ್ಳಾಕುಲು ದೈವದ ಓಲಸರಿ ನೇಮೋತ್ಸವ, ಮಧ್ಯಾಹ್ನ 12.30 ರಿಂದ ಅನ್ನಸಂತರ್ಪಣೆ, ಅಪರಾಹ್ನ 1.30 ರಿಂದ ಮಹಿಷಂದಾಯ ದೈವದ ನೇಮೋತ್ಸವ ಮತ್ತು ಕೊಡಮಣಿತ್ತಾಯ ದೈವದ ನೇಮ, ರಾತ್ರಿ 7.30 ರಿಂದ ಭಂಡಾರ ತೆಗೆದು ಗುಳಿಗ ದೈವದ ನೇಮ ನಡೆಯಲಿದೆ ಎಂದು ಪುಣ್ಚಪ್ಪಾಡಿ ಸಾರಕರೆ ಬೀಡು ಶ್ರೀ ಧರ್ಮಅರಸು ಉಳ್ಳಾಕುಲು ದೈವಸ್ಥಾನದ ಆಡಳಿತ ಮೋಕ್ತೇಸರ ಮಹಾಬಲ ಶೆಟ್ಟಿ ಕೊಮ್ಮಂಡ ಹಾಗೂ ಶ್ರೀ ಧರ್ಮಅರಸು ಉಳ್ಳಾಕುಲು ಸೇವಾ ಸಮಿತಿಯ ಅಧ್ಯಕ್ಷ ಮತ್ತು ಪದಾಧಿಕಾರಿಗಳು ತಿಳಿಸಿದ್ದಾರೆ.


ಚಪ್ಪರ ಮುಹೂರ್ತ: ಹಿರಿಯರಾದ ಕೃಷ್ಣಪ್ಪ ಮಲೆಕುಡಿಯ ಬದಿಯಡ್ಕರವರು ಚಪ್ಪರ ಮುಹೂರ್ತವನ್ನು ನೆರವೇರಿಸಿದರು.ಪುಣ್ಚಪ್ಪಾಡಿ ಸಾರಕರೆ ಬೀಡು ಶ್ರೀ ಧರ್ಮಅರಸು ಉಳ್ಳಾಕುಲು ದೈವಸ್ಥಾನದ ಆಡಳಿತ ಮೊಕ್ತೇಸರ ಮಹಾಬಲ ಶೆಟ್ಟಿ ಕೊಮ್ಮಂಡ, ಪ್ರಕಾಶ್ ರೈ ಸಾರಕರೆ, ಸೋಮಪ್ಪ ಪೂಜಾರಿ, ಅಶೋಕ್ ಕುಮಾರ್, ಸುಂದರ ಗೌಡ, ಸಾಂತಪ್ಪ ಗೌಡ, ಕಿಶೋರ್ ಕುಮಾರ್, ರಮೇಶ್ ಬೊಳ್ಳಾಜೆ, ಸುಧಾಕರ್ ಬೊಳ್ಳಾಜೆ, ಗಣೇಶ್ ಕಾರೆತ್ತೋಡಿ, ಅಣ್ಣಿನೆಕ್ಕಿ, ಬೇಡು ಗುರಿಯಡ್ಕ, ಸೂರಪ್ಪ ಗೌಡ ಬದಿಯಡ್ಕ, ನಾರಾಯಣ ಪುಣ್ಚಪ್ಪಾಡಿ, ಆನಂದ ಒಡಂತರ್ಯ, ಪುಟ್ಟಣ್ಣ ಗೌಡ ಬದಿಯಡ್ಕ, ಸಮಿತಿಯ ಅಧ್ಯಕ್ಷ ದಿಲೀಪ್ ಹೆಗ್ಡೆ, ಕಾರ್‍ಯದರ್ಶಿ ಕರುಣಾಕರ ಗೌಡ ಸಾರಕರೆ, ಕೃಷ್ಣಪ್ಪ ಗೌಡ ಉಪಸ್ಥಿತರಿದ್ದರು.

ಶತಮಾನಗಳ ಇತಿಹಾಸ ಹೊಂದಿರುವ ಕಾರಣಿಕದ ಕ್ಷೇತ್ರ

ಶತಮಾನಗಳ ಇತಿಹಾಸವನ್ನು ಹೊಂದಿರುವ ಕಾರಣಿಕದ ಕ್ಷೇತ್ರವಾಗಿರುವ ಪುಣ್ಚಪ್ಪಾಡಿ ಗ್ರಾಮದ ಸಾರಕರೆ ಬೀಡುವಿನಲ್ಲಿ ಶ್ರೀ ಧರ್ಮ ಅರಸು ಉಳ್ಳಾಕುಲು ಮತ್ತು ಪರಿವಾರ ದೈವಗಳ ಜಾತ್ರೆಯು ಸಾರಕರೆ ಬೀಡು ಬಲ್ಲಾಳರ ಆಳ್ವಿಕೆಯಲ್ಲಿ ವಿಜ್ರಂಭಣೆಯಿಂದ ನಡೆಯಿತ್ತಿದ್ದು, ತದನಂತರ ಕಾಲಾಂತರದಿಂದ ಜಾತ್ರೆಯು ನಿಂತು ಹೋಗಿತ್ತು. ಆನಂತರ ಸಾರಕರೆ ಬೀಡು ದಿ.ನಾರಾಯಣ ರೈರವರ ನೇತೃತ್ವದಲ್ಲಿ 35 ವರ್ಷಗಳ ಹಿಂದೆ ಒಮ್ಮೆ ಜಾತ್ರೆ ವಿಜ್ರಂಭಣೆಯಿಂದ ನಡೆದಿತ್ತು ಅನಂತರ ಆ ಪವಿತ್ರ ಸ್ಥಳದ ಮಹತ್ವವನ್ನು ಅರಿತು ಜೋತಿಷ್ಯ ಮಾಡಾವು ವೆಂಕಟ್ರಮಣ ಭಟ್‌ರವರ ಮಾರ್ಗದರ್ಶನದಲ್ಲಿ ಪ್ರಶ್ನೆ ನಡೆದು ಮಹಾಬಲ ಶೆಟ್ಟಿ ಕೊಮ್ಮಂಡರವರ ಆಡಳಿತದಲ್ಲಿ ಹಾಗೂ ಊರ ಮತ್ತು ಪರವೂರ ಭಕ್ತರ ಸಹಕಾರದಿಂದ ಜೀರ್ಣೋದ್ಧಾರ ಕಾರ್ಯ ನಡೆದು ವೇದಮೂರ್ತಿ ಅನಂತ ಕಲ್ಲೂರಾಯ ಬಂಬಿಲರವರ ನೇತ್ರತ್ವದಲ್ಲಿ 2011ರಲ್ಲಿ ಪ್ರತಿಷ್ಠಾ ಕಲಶ ನಡೆದು ವೈಭವದ ಜಾತ್ರೋತ್ಸವ ನಡೆಯುತ್ತಾ ಬರುತ್ತಿದೆ. ಕ್ಷೇತ್ರದಲ್ಲಿ ಅನೇಕ ಪವಾಡಗಳು ನಡೆದಿದೆ. ಸಂತಾನ ಪ್ರಾಪ್ತಿ, ಆರೋಗ್ಯ, ಅಭಿವೃದ್ಧಿಯ ಬಗ್ಗೆ ಪ್ರಾರ್ಥಿಸಿದಲ್ಲಿ ಶೀಘ್ರ ಪರಿಹಾರ ಸಿಕ್ಕಿರುವ ಉದಾಹರಣೆ ಇದೆ. ಸದ್ರಿ ಉಳ್ಳಾಕುಲು ಮಾಡದಲ್ಲಿ ಧರ್ಮಸ್ಥಳ ಡಾ| ವಿರೇಂದ್ರ ಹೆಗ್ಗಡೆ ಹಾಗೂ ಊರ ಪರವೂರ ಭಕ್ತರ ಸಹಕಾರದಿಂದ ರೂ. 5 ಲಕ್ಷದ 30 ಸಾವಿರ ವೆಚ್ಚದಲ್ಲಿ ಶಾಶ್ವತ ಚಪ್ಪರ ಹಾಗೂ ಮಾಡದ ಅಂಗಣ ಸಿಮೆಂಟು ನೆಲಹಾಸು ಈಗಾಗಲೇ ಪೂರ್ಣಗೊಂಡಿದೆ ಎಂದು ದೈವಸ್ಥಾನದ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here