ಕಡತ ವಿಲೇವಾರಿ ಸಪ್ತಾಹ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯಬೇಕು -ಪುತ್ತೂರಿನಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ

0

 


ಪುತ್ತೂರು: ಇಲಾಖೆಯಲ್ಲಿರುವ ಕಡತ ವಿಲೇವಾರಿಗಳು ಫೆ.28ರ ಒಳಗೆ ಮುಗಿಸಬೇಕೆಂದು ಇಟ್ಟಿರುವ ಗುರಿಗೆ ಸಂಬಂಧಿಸಿ ಕಡತ ವಿಲೇವಾರಿ ಸಪ್ತಾಹ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯಬೇಕೆಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು ಹೇಳಿದರು.
ಅವರು ಫೆ. 23ರಂದು ಸಂಜೆ  ಪುತ್ತೂರು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಮಾದ್ಯಮದವರೊಂದಿಗೆ ಮಾತನಾಡಿದರು. ಈಗಾಗಲೇ ಮಂಗಳೂರು, ಬಂಟ್ವಾಳ, ಪುತ್ತೂರು ತಾಲೂಕಿಗೆ ಭೇಟಿ ನೀಡಿ ಕಡತ ವಿಲೇವಾರಿ ಪರಿಶೀಲನೆ ನಡೆಸಿದ್ದೇನೆ. ಹೆಚ್ಚಿನ ಅವಧಿಯಲ್ಲಿ ಕೆಲಸ ಮಾಡುವುದರ ಜೊತೆಗೆ ನಮ್ಮಲ್ಲಿನ ಹಳೆ ಕಡತಗಳು, ದೂರುಗಳು ಇತ್ಯರ್ಥ ಆಗಬೇಕು. ನಮ್ಮ ಜಿಲ್ಲೆಯಲ್ಲಿ ಸುಮಾರು 82ಸಾವಿರ ಕಡತಗಳು ಗುರುತಿಸಿದ್ದೇವೆ. ಅಷ್ಟು ಫೈಲುಗಳ ಪೈಕಿ ಪೆನ್‌ಷನ್, ಚುನಾವಣೆ ಕಾರ್ಡ್ ಸೇರಿದಂತೆ ಬೇರೆ ಬೇರೆ ರೀತಿಯ ರೊಟೇಷನ್ ಆಗುವ 50 ಸಾವಿರ ಫೈಲ್‌ಗಳನ್ನು ಕ್ಲೀಯರ್ ಮಾಡುವ ಕೆಲಸ ಮಾಡಲಿದ್ದೇವೆ. ಯಾವುದಾದರೂ ಕಡತವನ್ನು ಇತ್ಯರ್ಥ ಮಾಡಲು ಆಗದಿದ್ದರೆ ಈ ಕುರಿತು ಸಂಬಂದಪಟ್ಟ ಫಲಾನುಭವಿಗಳಿಗೆ ಮಾಹಿತಿ ನೀಡಬೇಕು. ಒಟ್ಟಿನಲ್ಲಿ ಕಡತ ವಿಲೇವಾರಿ ಸಪ್ತಾಹ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯಬೇಕೆಂದು ಹೇಳಿದ ಅವರು ತಾಲೂಕು ಆಸ್ಪತೆಯಲ್ಲಿ ಕೂಡಾ ಕೆಲವೊಂದು ಅರ್ಜಿಗಳನ್ನು ರೀ ಕಾಲ್ ಮಾಡಲಾಗುವುದು. ಕೆಲವೊಂದು ತಾಂತ್ರಿಕ ಸಮಸ್ಯೆಗಳನ್ನು ಇಲ್ಲಿನ ಮೆಡಿಕಲ್ ಆಫೀಸರ್ ಅವರಲ್ಲಿ ಚರ್ಚೆ ಮಾಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಸಹಾಯಕ ಕಮೀಷನರ್ ಗಿರೀಶ್ ನಂದನ್, ತಹಸೀಲ್ದಾರ್ ರಮೇಶ್ ಬಾಬು, ಜಿ.ಪಂ ಸಿಇಒ ಡಾ. ಕೆ.ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಆಶಾ ಜ್ಯೋತಿ ಪುತ್ತೂರಾಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here