ಶಿವಮೊಗ್ಗದ ಗಲಭೆಗೆ ಪ್ರಚೋದನೆ, ಹಿಂಸಾಚಾರಕ್ಕೆ ನೇತೃತ್ವ ನೀಡಿದ ಈಶ್ವರಪ್ಪನವರನ್ನು ಸಚಿವ, ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಎಸ್‌ಡಿಪಿಐ ಪ್ರತಿಭಟನೆ

0

ಪುತ್ತೂರು:ತನ್ನ ಮೇಲಿನ ಆರೋಪಗಳನ್ನು ಮರೆ ಮಾಚಲು ಸಚಿವ ಈಶ್ವರಪ್ಪನವರೇ ಹರ್ಷರವರನ್ನು ಕೊಲೆ ಮಾಡಿಸಿದರೇ?, ತನಿಖೆಯ ಮೊದಲೇ ಎಸ್‌ಡಿಪಿಐ, ಮುಸ್ಲಿಂ ಸಮುದಾಯದವರು ಕೊಲೆ ಮಾಡಿರುವುದಾಗಿ ಹೇಳಿಕೆ ನೀಡುತ್ತಿರುವಾಗ ಅವರ ಮೇಲೆ ಭಲವಾದ ಸಂಶಯ ಮೂಡುತ್ತಿದೆ. ಬಿಜೆಪಿ ಪಕ್ಷದಿಂದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾರವರು ಈಶ್ವರಪ್ಪನವರನ್ನು ಉಚ್ಚಾಟಿಸಬೇಕು. ಇಲ್ಲದಿದ್ದರೆ ಕರ್ನಾಟಕದ ಆರು ಕೋಟಿ ಕನ್ನಡಿಗರು ಈಶ್ವರಪ್ಪನವರನ್ನು ಹಿಡಿದು ಅರಬ್ಬಿ ಸಮುದ್ರಕ್ಕೆ ಅಟ್ಟಲಿದ್ದಾರೆ. ಸಚಿವ ಸ್ಥಾನ, ಶಾಸಕ ಸ್ಥಾನದಿಂದ ಅವರನ್ನು ವಜಾಗೊಳಿಸಬೇಕು ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಲತೀಪ್ ಪುತ್ತೂರು ಆಗ್ರಹಿಸಿದರು.

ಶಿವಮೊಗ್ಗದಲ್ಲಿ ಗಳಭೆಗೆ ಪ್ರಚೋದನೆ ಮತ್ತು ಹಿಂಸಾಚಾರಕ್ಕೆ ನೇತೃತ್ವ ನೀಡಿದ ಸಚಿವ ಈಶ್ವರಪ್ಪನವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಎಸ್‌ಡಿಪಿಐಯಿಂದ ಫೆ.೨೩ರಂದು ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಈಶ್ವರಪ್ಪನವರ ಹೇಳಿಕೆಗಳಿಂದಲೇ ಇಂದು ಶಿವಮೊಗ್ಗದಲ್ಲಿ ಬೆಂಕಿ ಹತ್ತಿಕೊಳ್ಳುತ್ತಿದೆ. ಮನೆ, ಅಂಗಡಿ, ಪ್ರಾರ್ಥನಾ ಮಂದಿರ, ವಾಹನಗಳಿಗೆ ಹಾನಿಯಾಗಿದೆ. ಅಧಿಕಾರಕ್ಕಾಗಿ ಮಾತ್ರ ಹಿಂದುಗಳು ನಾವೇಲ್ಲ ಒಂದು ಎಂದು ಹೇಳಿದ್ದಾರೆ. ರಾಜಕೀಯ ಲಾಭಕ್ಕಾಗಿ ಮಾತ್ರ ಹಿಂದುತ್ವವನ್ನು ಬಳಸುತ್ತಿದ್ದಾರೆ. ಧರ್ಮಗಳ ಮಧ್ಯೆ ಒಡಕು ಹುಟ್ಟಿಸಿ ಗಲಭೆಗಳನ್ನು ಸೃಷ್ಠಿಸುತ್ತಿದ್ದಾರೆ. ವಿನಾಯಕ ಬಾಳಿಗಾ, ಪರೇಶ್ ಮೆಸ್ತಾರಂತಹ ೧೩ ಮಂದಿಯ ಕೊಲೆಗಳು ನಡೆದಿದ್ದು ಇದರ ಹಿಂದೆ ಆರ್‌ಎಸ್‌ಎಸ್ ಇದೆ ಎಂದು ಆರೋಪಿಸಿದರು.

ಶಿವಮೊಗ್ಗದಲ್ಲಿ ಹರ್ಷ ಕೊಲೆಗೆ ಸಂಬಂಧಿಸಿದ ಪೊಲೀಸ್ ತನಿಖೆಗೆ ಮೊದಲೇ ಮಾಹಿತಿ ಹೇಗೆ ದೊರೆತಿದೆ? ಮಂತ್ರಿಗಳಿಗೆ, ಸಂಸದರೆ ಜನಪ್ರತಿನಿಧಿಗಳಿಗೆ ತನಿಖೆಗೆ ಮೊದಲೇ ಮಾಹಿತಿ ದೊರೆಯುವುದಾದರೆ ಪೊಲೀಸ್ ಇಲಾಖೆಯನ್ನು ಯಾಕೆ ಭರ್ಕಾಸ್ತುಗೊಳಿಸಬಾರದು? ತನಿಖೆಯ ಸಂಪೂರ್ಣ ಹೊಣೆಯನ್ನು ಜನಪ್ರತಿನಿಧಿಗಳಿಗೆ ವಹಿಸಬಹುದಲ್ಲವೇ? ಇದಕ್ಕೆ ಪೊಲೀಸ್ ಇಲಾಖೆ ಸ್ಪಷ್ಟಣೆ ನೀಡಬೇಕು. ಸಚಿವ ಈಶ್ವರಪ್ಪ ಹಾಗೂ ಸಂಸದ ವಿಜಯೇಂದ್ರರವರ ನೇತೃತ್ವದಲ್ಲಿ ಪೊಲೀಸ್ ವ್ಯವಸ್ಥೆಯ ಮಧ್ಯೆಯೇ ಶವಯಾತ್ರೆಯ ಮೆರವಣಿಗೆ ನಡೆದರೂ ಹಲವು ಮನೆ, ಅಂಗಡಿ, ಪ್ರಾರ್ಥನಾ ಮಂದಿರ, ವಾಹನಗಳಿಗೆ ಹಾನಿಯಾಗಿದೆ. ಸುಮಾರು ರೂ.೩ಲಕ್ಷದಷ್ಟು ಹಣವಿದ್ದ ಪ್ರಾರ್ಥನ ಮಂದಿರದ ಕಾಣಿಕೆ ಡಬ್ಬಿಯನ್ನೇ ಹೊತ್ತೊಯ್ಯಲಾಗಿದ್ದು ಇದು ಮುಂದಿನ ಚುನಾವನೆಯಲ್ಲಿ ಈಶ್ವರಪ್ಪನವರಿಗೆ ಬೇಕಾಗಬಹುದು ಎಂದ ಲತೀಶ್ ಹೇಳಿದರು.

ಈ ದೇಶದಲ್ಲಿ ಹುಟ್ಟಿದವರಿಗೆ, ದೇಶದ ಮೇಲೆ ಪ್ರೀತಿ ಇದ್ದವರಿಗೆ ಕೆಂಪು ಕೋಟೆಯ ಮೇಲಿನ ರಾಷ್ಟ್ರ ಧ್ವಜ ಇಳಿಸಿ ಕೇಸರಿ ಧ್ವಜವನ್ನು ಹಾರಿಸುವುದಾಗಿ ಹೇಳಲು ಸಾಧ್ಯವಿಲ್ಲ. ದೇಶದಲ್ಲಿ ಎಸ್‌ಡಿಪಿಐ ಕಾರ್ಯಕರ್ತರಿದ್ದು ರಾಷ್ಟ್ರಧ್ವಜವನ್ನು ಕೆಂಪು ಕೋಟೆಯ ಮೇಲಿನಿಂದ ಇಳಿಸಲು ಸಾಧ್ಯವೇ ಇಲ್ಲ. ಇಂತಹ ಕೊಳಕು ಬಾಯಿಯ, ಹುಚ್ಚು ಮನಸ್ಸಿನವರನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆ ಅಥವಾ ಕಂಕನಾಡಿ ಆಸ್ಪತ್ರೆಯಲ್ಲಿ ಕಟ್ಟಿಹಾಕಬೇಕು ಎಂದು ಲತೀಫ್ ಪುತ್ತೂರು ಹೇಳಿದರು.

ಎಸ್‌ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಇಬ್ರಾಹಿಂ ಸಾಗರ್ ಮಾತನಾಡಿ, ಶಿವಮೊಗ್ಗದಲ್ಲಿ ನಡೆದ ಗಲಭೆಗಳಿಗೆ ಈಶ್ವರಪ್ಪನವರ ಪ್ರಚೋಧನೆಯೇ ಕಾರಣವಾಗಿದೆ. ಇದರಿಂದಾಗಿ ಕೋಟ್ಯಾಂತರ ಹಾನಿಯುಂಟಾಗಿದೆ. ಸರಕಾದದ ಜವಾಬ್ದಾರಿಯುತ ಸ್ಥಾನದಲ್ಲಿದ್ದರೂ ಅದರ ಬಗ್ಗೆ ಸಣ್ಣ ಚಿಂತನೆಯಿಲ್ಲದವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು. ಹಿಂದು ನಾವೆಲ್ಲಾ ಒಂದು ಹೇಳುವ ಆರ್‌ಎಸ್‌ಎಸ್ ಹಿಂದು ಸಮಾಜವನ್ನು ನಾಲ್ಕು ಭಾಗಳಾಗಿ ಮಾಡಿ ಆಡಳಿತ ನಡೆಸುತ್ತಿದ್ದಾರೆ. ಎರಡು ಪಂಗಡಗಳನ್ನು ಕಸದ ತೊಟ್ಟಿಗೆ ಬಿಸಾಡುತ್ತಾರೆ. ಮೂರನೇ ಪಂಗಡವನ್ನು ಗುಲಾಮರನ್ನಾಗಿಸಿದ್ದಾರೆ. ನಾಲ್ಕನೇ ಭಾಗದವರು ಆಡಳಿತ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರನ್ನು ಗುಲಾಮರನ್ನಾಗಿ ಮಾಡುವುದೇ ಆರ್‌ಎಸ್‌ಎಸ್‌ನ ಅಜೆಂಡಾವಾಗಿದೆ. ಇದಕ್ಕಾಗಿ ಇಲ್ಲಿ ಗಲಭೆಗಳನ್ನು ನಡೆಸುತ್ತಲೇ ಇದ್ದಾರೆ. ಇದನ್ನು ಎಸ್‌ಡಿಪಿಐ ಸಹಿಸುವುದಿಲ್ಲ ಎಂದರು.

ಉಪಾಧ್ಯಕ್ಷ ಹಮೀದ್ ಸಾಲ್ಮರ ಪ್ರಾಸ್ತಾವಿಕವಾಗಿ ಮಾತನಾಡಿ, ಹರ್ಷನ ಕೊಲೆಗೆ ಸಂಬಂಧಿಸಿದಂತೆ ಪ್ರಥಮ ತನಿಖಾ ವರದಿಗೆ ಮುಂಚೆ ಈ ಕೊಲೆಗೆ ಮುಸಲ್ಮಾನರಿಂದ ನಡೆದ ಕೊಲೆಯಾಗಿದೆ ಈಶ್ವರಪ್ಪ ಮಾಧ್ಯಮಗಳಲ್ಲಿ ಎಂದು ಹೇಳಿಕೆ ನೀಡಿದ್ದಾರೆ. ಈಶ್ವರಪ್ಪನವರ ಹೇಳಿಕೆಯ ಪ್ರಚೋದನೆಯಿಂದಾಗಿ ಇಂದು ಬಹಳಷ್ಟು ಕಷ್ಟ ನಷ್ಟ ಅನುಭವಿಸುವಂತಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಈಶ್ವರನಪ್ಪವರು ತಮ್ಮ ಕರ್ತವ್ಯವನ್ನು ಸಾಂವಿಧಾನಿಕವಾಗಿ ನಿರ್ವಹಿಸಬೇಕು. ಇಲ್ಲದಿದ್ದರೆ ಈ ಘಟನೆಯ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಶಾಸಕ ಸ್ಥಾನದಲ್ಲಿರಲು ಅವರು ಅರ್ಹರಲ್ಲ ಎಂದು ಹೇಳಿದರು. ಪ್ರತಿಭಟನೆಯ ಕೊನೆಯಲ್ಲಿ ಈಶ್ವರಪ್ಪನವರ ಭಾವಚಿತ್ರವನ್ನು ದಹನ ಮಾಡಿದರು.

ಸಂಘಟನಾ ಕಾರ್ಯದರ್ಶಿ ಸಿದ್ದೀಕ್, ಕೋಶಾಧಿಕಾರಿ ಅಶ್ರಫ್ ಬಾವು, ಅನ್ವರ ಪೆರುವಾಯಿ, ಯಾಹ್ಯಾ ಕೂರ್ನಡ್ಕ, ಉಮ್ಮರ್ ಫಾರೂಕ್ ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here